Advertisement

ಪಾಲಿಕೆಯಿಂದ ಅಂಗಡಿಯ ಅನಧಿಕೃತ ಶೆಲ್ಟರ್‌ ತೆರವು

10:09 AM Jun 23, 2018 | Team Udayavani |

ಮಹಾನಗರ: ನಗರದ ಸರ್ಕ್ನೂಟ್‌ ಹೌಸ್‌ನ ಮುಂಭಾಗದ ಅಂಗಡಿಯೊಂದರ ಅನಧಿಕೃತ ಶೆಲ್ಟರನ್ನು ಶುಕ್ರವಾರ ಮನಪಾ ಅಧಿಕಾರಿಗಳು ಪೊಲೀಸ್‌ ರಕ್ಷಣೆಯೊಂದಿಗೆ ಜೇಸಿಬಿ ಯಂತ್ರದ ಮೂಲಕ ತೆರವುಗೊಳಿಸಿದ್ದಾರೆ.

Advertisement

ಸರ್ಕ್ನೂಟ್‌ ಹೌಸ್‌ನ ಮುಂಭಾಗದ ಕಟ್ಟೆಯ ಬಳಿಯ ಅಂಗಡಿಯು ಅಧಿಕೃತ ಕಟ್ಟಡವಾಗಿದ್ದು, ಅದರ ಮುಂಭಾಗದಲ್ಲಿ ಶೀಟ್‌ ಮೂಲಕ ಶೆಲ್ಟರ್‌ ನಿರ್ಮಿಸಿ ಅಂಗಡಿಯನ್ನು ವಿಸ್ತರಿಸುವ ಕಾರ್ಯವನ್ನು ಮಾಡಲಾಗಿತ್ತು. ಈ ಕುರಿತು ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಅದನ್ನು ತೆರವು ಮಾಡುವಂತೆ ಅಂಗಡಿ ಮಾಲಕರಿಗೆ ಸೂಚನೆ ನೀಡಿದ್ದರು.

ಆದರೆ ಹಲವು ಬಾರಿ ಸೂಚನೆ ನೀಡಿದರೂ ಅನಧಿಕೃತ ನಿರ್ಮಾಣ ತೆರವುಗೊಂಡಿರಲಿಲ್ಲ. ಹೀಗಾಗಿ ಪಾಲಿಕೆಯ ಕಂದಾಯಾಧಿಕಾರಿ ಪ್ರವೀಣ್‌ಚಂದ್ರ, ಸಹಾಯಕ ನಗರ ಯೋಜನಾಧಿಕಾರಿ ಮಂಜುನಾಥಸ್ವಾಮಿ, ದಿಲೀಪ್‌ ಹಾಗೂ ಕಂದಾಯ ನಿರೀಕ್ಷಕರು ಸ್ಥಳದಲ್ಲಿ ಖುದ್ದು ಹಾಜರಿದ್ದು, ತೆರವು ಕಾರ್ಯ ನಡೆಸಿದರು.

ಜೇಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆಗೆ ಉರ್ವ ಪೊಲೀಸರು ರಕ್ಷಣೆ ನೀಡಿದ್ದರು. ಸಣ್ಣದಾಗಿ ನಿರ್ಮಾಣವಾಗಿದ್ದ ಅಂಗಡಿಯು ಬಳಿಕ ವಿಸ್ತರಣೆಗೊಂಡು ಅನಧಿಕೃತವಾಗಿ ಕಾರ್ಯಾಚರಿಸುತ್ತಿತ್ತು. ಈಗ ಅಧಿಕೃತ ನಿರ್ಮಾಣ ಉಳಿಸಿಕೊಂಡು ಉಳಿದ ಭಾಗವನ್ನು ತೆರವುಗೊಳಿಸಲಾಗಿದೆ. ಆರಂಭದಲ್ಲಿ ಅಂಗಡಿ ಮಾಲಕರಿಂದ ವಿರೋಧ ವ್ಯಕ್ತವಾದರೂ ಬಳಿಕ ಸುಮ್ಮನಾದರು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next