ಪಟ್ನಾ: ಕಾಂಗ್ರೆಸ್ ವಿರುದ್ಧ ಕೆಂಡಕಾರುತ್ತಿದ್ದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೃತೀಯ ರಂಗರಚನೆಯ ವಿಚಾರಧಾರೆ ಕೈಬಿಟ್ಟು, ಇದೀಗ ಕಾಂಗ್ರೆಸ್‌ಗೆ ಬೆಂಬಲ ನೀಡುವುದಕ್ಕೆ ಮುಂದಾ ಗಿದ್ದಾರೆ. ಇದಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರೇ ಕಾರಣವೆಂದು ನಿತೀಶ್ ಆಪ್ತ ಕೆ.ಸಿ.ತ್ಯಾಗಿ ತಿಳಿಸಿ ದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿದ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ತನ್ನ ನಿಲುವನ್ನು ಬದಲಾಯಿಸಿಕೊಂಡಿದ್ದೇನೆ. 2024ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಯ ಬದಲು, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳೆಲ್ಲ ಒಗ್ಗೂಡಿ ಸ್ಪರ್ಧಿಸಲು ಮನಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ. ಇಡೀ ರಾಷ್ಟ್ರಾದ್ಯಂತ ಬಿಜೆಪಿ ವಿರುದ್ಧ ವಿಪಕ್ಷಗಳನ್ನು ನಿತೀಶ್ ಒಗ್ಗೂಡಿಸುತ್ತಿದ್ದಾರೆ. ಇದು ಬಿಜೆಪಿಗೆ ದೊಡ್ಡ ಹೊಡೆತವಾದರೆ ಅಚ್ಚರಿಯಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.
ಕಳೆದ ತಿಂಗಳು ನಿತೀಶ್ ಕುಮಾರ್ ನೇತೃತ್ವದಲ್ಲಿ ಮಮತಾ ಸಭೆ ನಡೆಸಿದ್ದರು. ಈ ವೇಳೆ 2024ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಲು ತಾವೂ ಬೆಂಬಲಿಸುವದಾಗಿ ಹೇಳಿದ್ದರು. ಅದಕ್ಕೂ ಮುನ್ನ ತೃತೀಯರಂಗದ ರಚನೆಗೆ ಸಿದ್ಧವಾಗಿದ್ದರು!
ಈ ಕುರಿತಂತೆ ಸಿಎಂ ನಿತೀಶ್ ಸಹಚರರಾದ ಕೆ.ಸಿ.ತ್ಯಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಕಾಂಗ್ರೆಸೇತರ ತೃತೀಯರಂಗ ರಚಿಸಿ ಆ ಮೂಲಕವೇ 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಮಮತಾ ಯೋಜಿಸಿದ್ದರು.
ಆದರೆ ಸಿಎಂ ನಿತೀಶ್ ಕುಮಾರ್ ವಿಪಕ್ಷಗಳಿಂದ ಸರ್ವಸಮ್ಮತ ಅಭ್ಯರ್ಥಿ ಕಾರ್ಯತಂತ್ರದ ಮೂಲಕ ಪಕ್ಷ ಗಳನ್ನು ಒಗ್ಗೂಡಿಸಿ ಮತಗಳು ವಿಭಜನೆಯಾಗದಂತೆ ಮಾಡಲು ಯೋಜಿಸಿದ್ದರು. ಈ ವಿಚಾರವನ್ನು ಅರ್ಥೈ ಸಲು ಶ್ರಮಿಸಿದ್ದಾರೆ. ಹೀಗಾಗಿಯೇ ನಿತೀಶ್ ಅವರ ಮಾ ತಿಗೆ ಒಪ್ಪಿ, ಬ್ಯಾನರ್ಜಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಎಂದು ತ್ಯಾಗಿ ಹೇಳಿದ್ದಾರೆ.
ದೇವಮಾನವನಿಗೆ ತರಾಟೆ
“ಹಿಂದೂರಾಷ್ಟ್ರದ ಜ್ವಾಲೆ ಬಿಹಾರದಿಂದಲೇ ಆರಂಭವಾಗಲಿದೆ” ಎಂದು ಹೇಳಿಕೆ ನೀಡಿದ್ದ ಭಾಗೇಶ್ವರಧಾಮದ ಧೀರೇಂದ್ರಕೃಷ್ಣಗೆ ಬಿಹಾರ ಸಿಎಂ ನಿತೀಶ್ ತರಾಟೆ ತೆಗೆದುಕೊಂಡಿ ದ್ದಾರೆ. ಸ್ವಾತಂತ್ರ್ಯ ಹೋರಾಟದ ಪ್ರತಿಫಲವಾಗಿ ದೇಶದ ಸಂವಿಧಾನ ರಚನೆಯಾಗಿದೆ. ದೇಶಕ್ಕೆ ಸರ್ವಸಮ್ಮತ ಹೆಸರಿದೆ. ಅದನ್ನು ಬದಲಿಸುವ ಹಕ್ಕು ಯಾರಿಗೂ ಇಲ್ಲ ಇಂಥ ಹೇಳಿಕೆ ನೀಡಿರುವವರು ಸಂವಿಧಾನ ರಚನೆಯಾದಾಗ ಕನಿಷ್ಠ ಹುಟ್ಟಿಯೂ ಇರಲಿಲ್ಲ ಎಂದಿದ್ದಾರೆ.