Advertisement
ರಾಮಲ್‌ಕಟ್ಟೆ ಶ್ರೀ ಶಾರದಾ ಸಭಾಂಗಣದಲ್ಲಿ ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಗ್ರಾಮಸಭೆಯಲ್ಲಿ ಅರ್ಜಿ ವಿಲೇವಾರಿಗೆ ಸತಾಯಿಸುತ್ತಿರುವ ಅಧಿಕಾರಿಗಳ ಬಗ್ಗೆ ಗ್ರಾಮಸ್ಥರು ದೂರಿದರು.
ಗ್ರಾಮ ಸಭೆ ಇರುವುದು ಜನರ ಸಮಸ್ಯೆ ಪರಿಹಾರಕ್ಕಾಗಿ ಜನರು ಅಧಿಕಾರಿಗಳ ಗಮನಕ್ಕೆ ತರುವ ಅಹವಾಲುಗಳಿಗೆ ಪರಿಹಾರ ದೊರೆಯಬೇಕು. ಅಧಿಕಾರಿಗಳು ಇರುವುದು ಜನರ ಸಮಸ್ಯೆ ಪರಿಹಾರಕ್ಕಾಗಿಯೇ ಹೊರತು ಯಾವುದೇ ವಶೀಲಿಬಾಜಿಗಾಗಿ ಅಲ್ಲ. ಜನತೆಯ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಹೇಳಿದರು.
Related Articles
“ಆಹಾರ ಇಲಾಖೆಗೆ ಸಂಬಂಧಪಟ್ಟ ಮಾಹಿತಿ ನೀಡಲು ಗ್ರಾಮಸಭೆಗೆ ಆಹಾರ ಇಲಾಖೆ ನಿರೀಕ್ಷಕರೇ ಬರ
ಬೇಕು. ಗ್ರಾಮಕರಣಿಕರಲ್ಲಿ ದೂರನ್ನು ಹೇಳಿಕೊಂಡರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ’ ಎಂದು ಗ್ರಾಮಸ್ಥ ರೋರ್ವರು ಅಸಮಾಧಾನ ವ್ಯಕ್ತಪಡಿಸಿ ದರು. ಇದಕ್ಕೆ ಪ್ರತಿಕ್ರಿಯಿಸಿದ ನೋಡಲ್ ಅಧಿಕಾರಿಯವರು “ಆಹಾರ ನಿರೀಕ್ಷಕರು ಜಿಲ್ಲಾಧಿಕಾರಿ ಕಚೇರಿ ಸಭೆಯಲ್ಲಿ ಭಾಗವಹಿಸಿರುವ ಕಾರಣದಿಂದ ಗ್ರಾಮಸಭೆಗೆ ಹಾಜರಾಗಿಲ್ಲ. ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗುವುದು’ಎಂದರು.
ಸಣ್ಣ ಕೆಲಸ ಮಾಡಿದರೂ ಕೂಡ ಮೆಸ್ಕಾಂ ಸಿಬಂದಿ ಹಣ ಕೇಳುತ್ತಾರೆ ಎಂಬ ಆರೋಪಗಳು ಸಭೆಯಲ್ಲಿ ಕೇಳಿಬಂದವು.
ತಾ.ಪಂ. ಉಪಾಧ್ಯಕ್ಷ ಗಣೇಶ್ ಸುವರ್ಣ, ಪಿಡಿಒ ಚಂದ್ರಾವತಿ ಉಪಸ್ಥಿತರಿದ್ದರು.
Advertisement
ಆಧಾರ್ ಜೋಡಣೆಗೂ ವಸೂಲಿಪಡಿತರ ಚೀಟಿಯೊಂದಿಗೆ ಆಧಾರ್
ಸಂಖ್ಯೆ ಜೋಡಣೆಗೆ ಸೈಬರ್‌ನಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಾರೆ. ಇದರಿಂದಾಗಿ ಬಡಜನರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿ ಬಂತು. ಸರಕಾರ ಹಾಗೂ ಸೈಬರ್ ಸಂಸ್ಥೆಗಳು ಒಳ ಒಪ್ಪಂದ ಮಾಡಿಕೊಂಡು ಜನರಿಂದ ಹಣ ಲೂಟಿ ಮಾಡುತ್ತಿವೆ. ಹಣ ನೀಡಿದರೂ ಕೂಡ ಆಧಾರ್ ಸಂಖ್ಯೆ ಸರಿಯಾಗಿ ಲಿಂಕ್ ಆಗದೆ ಯಾರಧ್ದೋ ಸಂಖ್ಯೆ ಇನ್ಯಾರಧ್ದೋ ಖಾತೆಗೆ ಜೋಡಣೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಆಧಾರ್ ಸಂಖ್ಯೆ ಜೋಡಣೆ ದೋಷದಿಂದ ತುಂಬೆ ಗ್ರಾ.ಪಂ. ವ್ಯಾಪ್ತಿಯ ಅನೇಕ ವಿದ್ಯಾರ್ಥಿಗಳು ಆರ್‌ಟಿಇ ಅವಕಾಶ ವಂಚಿತರಾಗಿದ್ದಾರೆ ಎನ್ನುವ ದೂರು ಕೂಡ ಸಭೆಯಲ್ಲಿ ಕೇಳಿಬಂತು.