ನವದೆಹಲಿ: ಭಗವದ್ಗೀತೆಯಲ್ಲಿ ಕೂಡ ಶ್ರೀಕೃಷ್ಣ ಅರ್ಜುನನಿಗೆ ಜೆಹಾದ್ ಉಪದೇಶ ನೀಡಿರುವುದಾಗಿ ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ಪಾಟೀಲ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.
ಇದನ್ನೂ ಓದಿ:ಡೇವಿಡ್ ವಾರ್ನರ್ ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಿದ ಆಸೀಸ್ ನಾಯಕ ಫಿಂಚ್
ಭಗವದ್ಗೀತೆ ಕುರಿತು ಕಾಂಗ್ರೆಸ್ ಮುಖಂಡ ಶಿವರಾಜ್ ಪಾಟೀಲ್ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವೀಟ್ ನಲ್ಲಿ ಸಮಜಾಯಿಷಿ ನೀಡುವ ಮೂಲಕ ಕಾಂಗ್ರೆಸ್ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ.
ಶಿವರಾಜ್ ಪಾಟೀಲ್ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಜೈರಾಮ್ ರಮೇಶ್, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ “ಡಿಸ್ಕವರಿ ಆಫ್ ಇಂಡಿಯಾ”ದ ಆಯ್ದ ಭಾಗವನ್ನು ಹಂಚಿಕೊಂಡು, ಗೀತೆಯ ಸಾರ್ವಕಾಲಿಕ ಸಂದೇಶದ ಬಗ್ಗೆ ಉಲ್ಲೇಖಿಸಿರುವುದರ ಬಗ್ಗೆ ತಿಳಿಸಿದ್ದಾರೆ.
ಭಗವಾನ್ ಶ್ರೀಕೃಷ್ಣ ಕೂಡಾ ಅರ್ಜುನನಿಗೆ ಜೆಹಾದ್ ಪಾಠ ಮಾಡಿದ್ದು, ಈ ನಿಟ್ಟಿನಲ್ಲಿ ಜೆಹಾದ್ ಕೇವಲ ಇಸ್ಲಾಂಗೆ ಮಾತ್ರ ಸೀಮಿತವಲ್ಲ, ಇದು ಭಗವದ್ಗೀತೆ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿಯೂ ಇದೆ ಎಂದು ಶಿವರಾಜ್ ಪಾಟೀಲ್ ವಿವಾದಿತ ಹೇಳಿಕೆ ನೀಡಿದ್ದರು.