Advertisement

ಉ.ಕೊರಿಯಾಗೆ ನಿರ್ಬಂಧ: ಅಮೆರಿಕಕ್ಕೆ ವಿಶ್ವಸಂಸ್ಥೆ ಬೆಂಬಲ

08:10 AM Aug 07, 2017 | Team Udayavani |

ವಿಶ್ವಸಂಸ್ಥೆ: ಆಗಾಗ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ನಡೆಸಿ ಸದಾ ಯುದೊœàನ್ಮಾದದಲ್ಲಿ ಇರುವ ಉತ್ತರ ಕೊರಿಯಾಕ್ಕೆ ತಕ್ಕ ಪಾಠ ಕಲಿಸಲು ವಿಶ್ವಸಂಸ್ಥೆ ಮುಂದಾಗಿದೆ.

Advertisement

ಉತ್ತರ ಕೊರಿಯಾದ ಅತ್ಯುತ್ಸಾಹಕ್ಕೆ ಬ್ರೇಕ್‌ ಹಾಕಲಿಕ್ಕಾಗಿಯೇ ದಿಗ್ಬಂಧನ ಹೇರುವ ದೃಷ್ಟಿಯಿಂದ ಅಮೆರಿಕ ಸಿದ್ಧಪಡಿಸಿರುವ ಕರಡು ನಿರ್ಣಯಕ್ಕೆ ವಿಶ್ವ ಸಂಸ್ಥೆಯ 15 ಸದಸ್ಯ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿದೆ. ಪರಿಣಾಮ ಉ.ಕೊರಿಯಾ ಅಣ್ವಸ್ತ್ರ ಕ್ಷಿಪಣಿ ಯೋಜನೆ ಮೇಲೆ ನೇರ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲ, ಆರ್ಥಿಕ ಸಹಾಯದಿಂದಲೂ ಹಿಂದೆ ಸರಿಯಲು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸದಸ್ಯರಾಷ್ಟ್ರಗಳು ಸರ್ವಾನುಮತದ ಅಭಿಪ್ರಾಯಕ್ಕೆ ಬಂದಿದೆ. ಇತ್ತ ಚೀನಾ ಕೂಡ, ಯಾವುದೇ ನಿರ್ಧಾರ ಕೈಗೊಳ್ಳುವಾಗ “ಸ್ಮಾರ್ಟ್‌’ ಆಗಿರುವಂತೆ ನೋಡಿಕೊಳ್ಳಿ ಎಂದು ಉತ್ತರ ಕೊರಿಯಾಕ್ಕೆ ಒತ್ತಾಯಿಸಿದೆ. ಜತೆಗೆ, ಸಮಸ್ಯೆಗೆ ದಿಗ್ಬಂಧನವೊಂದೇ ಪರಿಹಾರವಲ್ಲ, ಮಾತುಕತೆ ಮೂಲಕ ಎಲ್ಲವನ್ನೂ ಇತ್ಯರ್ಥಪಡಿಸಿಕೊಳ್ಳುವುದು ಉತ್ತಮ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next