ಭುವನೇಶ್ವರ್: ಕ್ರಿಕೆಟ್ ಆಡುವಾಗ ಸಣ್ಣಪುಟ್ಟ ವಿಚಾರಕ್ಕೆ ವಾಗ್ವಾದ ನಡೆಯುವುದು ಸಾಮಾನ್ಯ. ಆದರೆ ಇಲ್ಲೊಂದು ಘಟನೆ ಒಡಿಶಾ ರಾಜ್ಯವನ್ನು ಬೆಚ್ಚಿ ಬೀಳಿಸಿದೆ.
ಭಾನುವಾರ (ಏ. 2 ರಂದು) ಒಡಿಶಾದ ಕಟಕ್ ನಲ್ಲಿ ಬ್ರಹ್ಮಪುರ ಮತ್ತು ಶಂಕರಪುರ ಎಂಬ ಎರಡು ತಂಡಗಳ ನಡುವೆ ಕ್ರಿಕೆಟ್ ಮ್ಯಾವ್ ನಡೆಯುತ್ತಿತ್ತು. ಈ ಪಂದ್ಯಕ್ಕೆ 22 ವರ್ಷದ ಲಕ್ಕಿ ರಾವುತ್ ತೀರ್ಪುಗಾರನಾಗಿ ನಿಂತಿದ್ದರು. ಪಂದ್ಯ ನಡೆಯುತ್ತಿದ್ದ ವೇಳೆ ಎಸೆತವೊಂದಕ್ಕೆ ʼನೋ ಬಾಲ್ʼ ಎಂದು ಅಂಪೈರ್ ತೀರ್ಪು ನೀಡಿದ್ದಾರೆ. ಈ ವೇಳೆ ಇದು ನೋ ಬಾಲ್ ಅಲ್ಲ ಎಂದು ಸ್ಮೃತಿ ರಂಜನ್ ರೌತ್ ಎಂಬಾತ ಅಂಪೈರ್ ನೊಂದಿಗೆ ವಾದಕ್ಕೆ ಇಳಿದಿದ್ದಾನೆ.
ಇದನ್ನೂ ಓದಿ: ಅಮೆರಿಕದಲ್ಲಿನ ಎಲ್ಲಾ ಕಚೇರಿಗಳನ್ನು ಮುಚ್ಚಿದ McDonals’s; ಉದ್ಯೋಗಿಗಳ ಕಡಿತಕ್ಕೆ ಸಜ್ಜು
ವಾದ ಜಗಳಕ್ಕೆ ತಿರುಗಿ ಚೂರಿಯಿಂದ ತೀರ್ಪುಗಾರನಾಗಿ ನಿಂತಿದ್ದ ಲಕ್ಕಿ ರಾವುತ್ ಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಲಕ್ಕಿ ರಾವುತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸುವಾಗಲೇ ಆತ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.
ಆರೋಪಿಯನ್ನು ಜನ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.