Advertisement

ಉಮ್ಮತ್ತೂರು ಗ್ರಾಮ ಪಂಚಾಯತ್ ವರಿಷ್ಟಗಾದಿಗೆ ಅವಿರೋಧ ಆಯ್ಕೆ

08:21 PM Jan 20, 2022 | Team Udayavani |

ಹುಣಸೂರು : ಹುಣಸೂರು ತಾಲೂಕು ಉಮ್ಮತ್ತೂರು ಗ್ರಾಮ ಪಂಚಾಯ್ತಿ ವರಿಷ್ಟರ ಗಾದಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ರವಿಕುಮಾರ್(ಸಾಮಾನ್ಯ) ಹಾಗೂ ಉಪಾಧ್ಯಕ್ಷರಾಗಿ ಅನುಸೂಯಮ್ಮ(ಸಾಮಾನ್ಯ ವರ್ಗ ಮಹಿಳೆ) ಅವಿರೋಧವಾಗಿ ಆಯ್ಕೆಯಾದರು.

Advertisement

ಆಂತರಿಕ ಒಪ್ಪಂದಂತೆ ಹಿಂದಿನ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ರಾಜಿನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.

ಗ್ರಾಮಪಂಚಾಯ್ತಿಯಲ್ಲಿ ಒಟ್ಟು 16 ಸದಸ್ಯರಿದ್ದು, ನಲ್ಲೂರು ಪಾಲ ಕ್ಷೇತ್ರದ ಸದಸ್ಯರಾದ ರವಿಕುಮಾರ್ ಹಾಗೂ ಅನುಸೂಯಮ್ಮ ಇಬ್ಬರೇ ನಾಮಪತ್ರಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಜಿ.ಪಂ.ಎಇಇ ಪ್ರಭಾಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದರು.

ಪಟಾಕಿ ಸಿಡಿಸಿ ಸಂಭ್ರಮ: ವರಿಷ್ಟರ ಆಯ್ಕೆ ಪ್ರಕಟಿಸುತ್ತಿದ್ದಂತೆ ಗ್ರಾ.ಪಂ.ಹೊರಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಅಭಿನಂದನೆ : ನೂತನ ಗ್ರಾ.ಪಂ.ವರಿಷ್ಟರನ್ನು ರಾಜ್ಯ ರೈತ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್, ಉಮ್ಮತ್ತೂರು ಗ್ರಾಮದ ಯಜಮಾನ ಭಾಸ್ಕರ್ ಮಾಜಿ ಅಧ್ಯಕ್ಷ ದೇವೇಂದ್ರ ಹಾಗೂ ವಾರಂಚಿ ಮಹದೇವು, ತಾ.ಪಂ. ಮಾಜಿ ಸದಸ್ಯೆ ರಾಜೇಂದ್ರಬಾಯಿ ಮತ್ತಿತರ ಮುಖಂಡರು ನೂತನ ವರಿಷ್ಟರನ್ನು ಅಭಿನಂದಿಸಿದರು.

Advertisement

ನಂತರ ಮಾತನಾಡಿದ ಅಧ್ಯಕ್ಷ ರವಿಕುಮಾರ್ ಶಾಸಕ ಮಂಜುನಾಥರ ಸಲಹೆ ಮತ್ತು ಗ್ರಾ.ಪಂ.ಸದಸ್ಯರ ಸಹಕಾರದಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭಿವೃದ್ದಿ ಕಾರ್ಯ ಕೈಗೊಳ್ಳುತ್ತೇನೆಂದರು.

ಬ್ರಷ್ಟಾಚಾರ ಮುಕ್ತ ಆಡಳಿತ ನೀಡಿ : ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ಮಾತನಾಡಿ ಶಾಸಕರ ಸಹಕಾರ ಪಡೆದು ಉಮ್ಮತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಆಗಬೇಕಿರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಕಾರ ಪಡೆಯಬೇಕು. ಭ್ರಷ್ಟಾಚಾರ ರಹಿತವಾದ ಆಡಳಿತ ನೀಡಲು ಮುಂದಾಗಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ದ.ಸಂ.ಸ ಮುಖಂಡ ಅತ್ತಿಕುಪ್ಪೆ ರಾಮಕೃಷ್ಣ, ಗ್ರಾ.ಪಂ. ಸದಸ್ಯ ಶಿವರಾಜು, ನಂಜುಂಡಸ್ವಾಮಿ, ಬಸವರಾಜೇಗೌಡ, ಗುರುಪುರ ಪಂಚಾಯ್ತಿ ಅಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷ ಪ್ರಶಾಂತ್, ಮುಖಂಡರಾದ ರಾಮಕೃಷ್ಣ, ಶೇಖರನಾಯ್ಕ, ಲೋಕೇಶ್, ಕುಮಾರ್, ರಹಮತ್ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next