Advertisement

ಫಿಕ್ಸಿಂಗ್‌: ಉಮರ್‌ ಅಕ್ಮಲ್‌ಗೆ ಪಿಸಿಬಿ ಶೋಕಾಸ್‌ ನೋಟಿಸ್‌

06:00 AM Jun 26, 2018 | Team Udayavani |

ಕರಾಚಿ: ಪಾಕಿಸ್ಥಾನದ‌ ಕ್ರಿಕೆಟಿಗ ಉಮರ್‌ ಅಕ್ಮಲ್‌ ಮತ್ತೆ ಸುದ್ದಿಯಾಗಿದ್ದಾರೆ. 2015ರಲ್ಲಿ ನಡೆದಿದ್ದ ವಿಶ್ವಕಪ್‌ ಕ್ರಿಕೆಟ್‌ ಕೂಟದ ಭಾರತ-ಪಾಕಿಸ್ಥಾನ ಪಂದ್ಯದ ವೇಳೆ ತನಗೆ ಫಿಕ್ಸಿಂಗ್‌ ಆಮಿಷ ಒಡ್ಡಲಾಗಿತ್ತು ಎಂದು ಅಕ್ಮಲ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಖಾಸಗಿ ಟೀವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಅವರು ಈ ವಿಷಯವನ್ನು ತಿಳಿಸಿದ್ದಾರೆ. 

Advertisement

ಈ ಬೆನ್ನಲ್ಲೇ ಪಿಸಿಬಿ (ಪಾಕ್‌ ಕ್ರಿಕೆಟ್‌ ಮಂಡಳಿ) ಅಕ್ಮಲ್‌ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಫಿಕ್ಸಿಂಗ್‌ ಆಮಿಷ ಬಂದಿದ್ದರೂ ಅದನ್ನು ಪಾಕ್‌ ಕ್ರಿಕೆಟ್‌ ಮಂಡಳಿಗೆ ಉಮರ್‌ ಅಕ್ಮಲ್‌ ತಿಳಿಸಿಲ್ಲದಿರುವುದು ಅಪ ರಾಧವಾಗಿದೆ. ಹೀಗಾಗಿ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಜೂ. 27ರೊಳಗೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಪಿಸಿಬಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next