Advertisement
ನರಿಂಗಾನದ ಮೊಂಟೆಪದವು ಸರಕಾರಿ ಪ್ರೌಢ ಶಾಲೆಯ (ಕರ್ನಾಟಕ ಪಬ್ಲಿಕ್ ಸ್ಕೂಲ್ನ ) ಶಿಕ್ಷಕ ಸಂತೋಷ್ ಕುಮಾರ್ ಅವರು 21 ದಿನವೂ ಶಾಲೆ ಮುಗಿಸಿ ಸಂಜೆಯಿಂದ ರಾತ್ರಿವರೆಗೆ ಆಸ್ಪತ್ರೆಯಲ್ಲಿದ್ದು ಕೊಂಡು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದ್ದರು.
ಸಾಂತ್ವನ ಹೇಳುತ್ತಿದ್ದರು
ತಾಯಿ ಗಂಭೀರ ಸ್ಥಿತಿಯಲ್ಲಿ ಬೇರೆ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಸಹೋದರಿಯರನ್ನು ಒಂದೇ ಐಸಿಯುವಿ ನಲ್ಲಿ ಇರಿಸಲಾಗಿತ್ತು. ಅವರು ಪರಸ್ಪರ ಸಾಂತ್ವನ ಹೇಳಿಕೊಳ್ಳುತ್ತಿದ್ದರು. ಡಿ.13ಕ್ಕೆ ತಾಯಿ ಸಾವನ್ನಪ್ಪಿದ್ದು, ಈವಿಷಯವನ್ನು ಪುತ್ರಿಯರಿಗೆ ತಿಳಿಸಿರಲಿಲ್ಲ. ಹಿರಿಯ ಸಹೋದರಿ ಝುಲೇಖಾ ಮೆಹದಿಯಾ ಡಿ. 26ರಂದು ಮೃತಪಟ್ಟ ವಿಚಾರವನ್ನು ಮತ್ತಿಬ್ಬರು ಸಹೋದರಿಯರಿಗೆ ತಿಳಿಸಿರಲಿಲ್ಲ. ಡಿ. 28ರಂದು ಮೂರನೇ ಪುತ್ರಿ ಫಾತಿಮತ್ ಮಾಯಿಝ ಸಾವಿನ ಸಂದರ್ಭದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದ ಮಝೀಹಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮಾವನ ಮನೆಗೆ ಕಳುಹಿಸಿದ್ದು,ತಾಯಿ ಮತ್ತು ಇಬ್ಬರು ಸಹೋದರಿಯರು ಮೃತಪಟ್ಟ ವಿಚಾರ ಈಕೆಗೆ ತಿಳಿದಿಲ್ಲ. ಎಲ್ಲರೂ ಗುಣಮುಖರಾಗುವ ವಿಶ್ವಾಸ ಅವರಲ್ಲಿತ್ತು ಎನ್ನುತ್ತಾರೆ ಶಿಕ್ಷಕ ಸಂತೋಷ್ ಸಾವಿನ ಅಂಚಿನಲ್ಲಿದ್ದರೂ ಕಲಿಕೆಯ ವಿಚಾರದಲ್ಲಿ ಚಿಂತೆಪ್ರತಿದಿನ ಸಂಜೆ ನಾನು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೋಟ್ಸ್ ಮತ್ತು ಪರೀಕ್ಷೆ ಬಗ್ಗೆ ಚಿಂತಿಸುತ್ತಿದ್ದರು. ಪರೀಕ್ಷೆ ಬರೆಯದೇ ನಿಮ್ಮನ್ನು ತೇರ್ಗಡೆ ಮಾಡುತ್ತೇವೆ ಎಂದು ಧೈರ್ಯ ನೀಡುತ್ತಿದ್ದೆ. ಆಗ ವಿದ್ಯಾರ್ಥಿನಿಯರು ಮುಖದಲ್ಲಿ ಸ್ವಲ್ಪ ಸಮಾಧಾನ ಕಾಣುತ್ತಿದ್ದೆ ಎನ್ನುತ್ತಾರೆ ಸಂತೋಷ್.
Related Articles
ಮೊಂಟೆಪದವು ಸರಕಾರಿ ಪ್ರೌಢಶಾಲೆಯಲ್ಲಿ 20 ವರ್ಷ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ಆಂಗ್ಲ ಭಾಷಾ ಶಿಕ್ಷಕ ಸಂತೋಷ್ ಅವರು ವಿದ್ಯಾರ್ಥಿಗಳಿಗೆ ತುಂಬಾ ಆಪ್ತರಾಗಿದ್ದಾರೆ. ಆರಂಭದಲ್ಲಿ 300ರಷ್ಟು ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಈಗ 1,300ರಷ್ಟು ಮಕ್ಕಳು ಓದುತ್ತಿದ್ದಾರೆ. ಸಂತೋಷ್ ಅವರು ಜಿಲ್ಲಾ ಉತ್ತಮ ಶಿಕ್ಷಕ, ಯೇನೆಪೊಯ ವಿವಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದರು. ಈ ಮೂವರು ವಿದ್ಯಾರ್ಥಿನಿಯರನ್ನು ಎಲ್ಕೆಜಿಯಿಂದಲೂ ಇದೇ ಶಾಲೆಯಲ್ಲಿ ಓದಿದ್ದರು.
Advertisement