Advertisement
ಕಳೆದ ಕೆಲ ದಿನಗಳಿಂದ ಉಳ್ಳಾಲ ಪರಿಸರದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಸೋಂಕಿತರಲ್ಲಿ ಅನಿಲ ಕಂಪೌಂಡ್ ಉಳ್ಳಾಲದ 6 ಮತ್ತು 3 ರ ಹರೆಯದ ಬಾಲಕರು , ಮುಕ್ಕಚ್ಚೇರಿಯ 29ರ ಮಹಿಳೆ, 39 ವರ್ಷದ ಗಂಡಸು, ಆಝಾದನಗರ ಉಳ್ಳಾಲದ 44 ಹಾಗೂ 55 ರ ಗಂಡಸು, 36, 50, 30ರ ಮಹಿಳೆಯರು, 13 ಹಾಗೂ 8ರ ಬಾಲಕರು, 12 ವರ್ಷದ ಬಾಲಕಿ, 2 ವರ್ಷದ ಹರೆಯದ ಮಗು, ಉಳ್ಳಾಲ ಪಟೇಲ ಕಂಪೌಂಡಿನ 51ರ ಹರೆಯದ ಗಂಡಸು, ಹರೇಕಳ ಪಂಚಾಯತ್ ಬಳಿಯ 26 ರ ಯುವಕ , ಅಕ್ಕರೆಕೆರೆ ಉಳ್ಳಾಲದ 46 ವರ್ಷದ ಗಂಡಸು , ಮುನ್ನೂರು ಸಂತೋಷನಗರದ 52 ರ ಗಂಡಸು, ತೊಕ್ಕೊಟ್ಟು ಪರಿಸರದ 13ವರ್ಷದ ಬಾಲಕಿ , ಮೇಲಂಗಡಿ ಉಳ್ಳಾಲದ 32 ವರ್ಷದ ಗಂಡಸು, ಉಳ್ಳಾಲ ಹೈದರಾಲಿ ರಸ್ತೆಯ 30 ವರ್ಷದ ಗಂಡಸು, ಮುಕ್ಕಚ್ಚೇರಿ ರಸ್ತೆಯ 48 ವರ್ಷದ ಗಂಡಸು, ಸುಲ್ತಾನ್ ನಗರ ಉಳ್ಳಾಲದ 48ವರ್ಷದ ಗಂಡಸು, ಉಳ್ಳಾಲ ಪದ್ಮಶಾಲಿ ಕಂಪೌಂಡಿನ 44 ವರ್ಷದ ಮಹಿಳೆ , ಮೊಗವೀರಪಟ್ನ ಉಳ್ಳಾಲದ 54 ವರ್ಷದ ಗಂಡಸು , ಸೋಮೇಶ್ವರ ಉಳ್ಳಾಲದ 65 ವರ್ಷದ ಗಂಡಸು, ಅನಿಲಕಂಪೌಂಡ್ ಉಳ್ಳಾಲದ 29ವರ್ಷದ ಗಂಡಸು, ಕಲ್ಲಾಪು ತೊಕ್ಕೊಟ್ಟು ವಿನ 27ವರ್ಷದ ಮಹಿಳೆ ಸೇರಿ ಸೋಮೇಶ್ವರ, ಮುನ್ನೂರು, ಹರೇಕಳದಲ್ಲಿ ಮೂವರು ಸೇರಿ ಒಟ್ಟು ೨೮ ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ.