Advertisement
ಮನೆಯ ಆವರಣ ಗೋಡೆ, ತಡೆಗೋಡೆ, ಗುಡ್ಡ ಕುಸಿತದಂತಹ ಹಲವಾರು ಘಟನೆಗಳು ನಡೆದಿವೆ. ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಪಿಲಿಕೂರಿನಲ್ಲಿ ತಡೆಗೋಡೆ ಮನೆಯ ಮೇಲೆ ಬಿದ್ದಿದ್ದು, ಮನೆಯೊಳಗಿದ್ದ ಐವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಸಮುದ್ರ ತಟದ ಜನರಿಗೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಉಚ್ಚಿಲ ವ್ಯಾಪ್ತಿಯಲ್ಲಿರುವ ರೆಸಾರ್ಟ್‌ಗಳನ್ನು ಬಂದ್ ಮಾಡುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಪ್ರಾಕೃತಿಕ ವಿಕೋಪ ಪ್ರದೇಶಗಳಿಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿ ಪ್ರಮಾಣವನ್ನು ಅಂದಾಜು ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಾಳಿ ಮಳೆಯಿಂದ ಒಟ್ಟು 20 ಮನೆಗಳಿಗೆ ಹಾನಿಯಾಗಿದೆ. ಕೊಣಾಜೆಯಲ್ಲಿ ಮಿಷನ್ ಕಾಂಪೌಂಡ್ ಬಳಿ ಸಿಡಿಲು ಬಡಿದು ಹೆಲೆನ್ ಸೋನ್ಸ್ ಅವರ ಮನೆಯ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಹಾನಿಯಾಗಿದೆ.
Related Articles
Advertisement
ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿತ್ತು. ರಾ. ಹೆ., ರಾಜ್ಯ ಹೆದ್ದಾರಿಯಲ್ಲೂ ನೀರು ತುಂಬಿ ವಾಹನ ಚಾಲಕರು ಪರದಾಡುವಂತಾಯಿತು.