Advertisement

ಉಳ್ಳಾಲ: ಕುಸಿದ ಮನೆ; 5 ಮಂದಿ ಪಾರು

07:10 AM Aug 24, 2017 | Team Udayavani |

ಉಳ್ಳಾಲ: ಮಳೆಯಿಂದಾಗಿ ಗೋಡೆ ಕುಸಿಯುತ್ತಿರುವ ಶಬ್ದ ಕೇಳಿ ಹೊರಗೆ ಧಾವಿಸಿದ್ದರಿಂದ ಮನೆಯಲ್ಲಿದ್ದ ಐವರು ಪವಾಡಸದೃಶವಾಗಿ ಪಾರಾದ  ಘಟನೆ ಇಲ್ಲಿನ ಕಿನ್ಯ ಗ್ರಾಮ ಪಂಚಾಯತ್‌ನ ಮಿನಾದಿಯಲ್ಲಿ ಸಂಭವಿಸಿದ್ದು, ಸುಮಾರು ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

Advertisement

ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶ್ರೀನಿವಾಸ ಮತ್ತು ಭಾಗ್ಯಶ್ರೀ ದಂಪತಿಗೆ ಸೇರಿದ ಮನೆ ಇದಾಗಿದ್ದು, ನಸುಕಿನ ಜಾವ ಶಬ್ದ ಕೇಳಿ ಎಚ್ಚೆತ್ತಾಗ ಮನೆಯ ಪಾರ್ಶ್ವ ಕುಸಿಯುತ್ತಿರುವುದು ಕಂಡು ಬಂದಿದ್ದು, ಮನೆಯಲ್ಲಿದ್ದ ಶ್ರೀನಿವಾಸ ಮತ್ತು ಭಾಗ್ಯಶ್ರೀ ಹಾಗೂ ಮಕ್ಕಳಾದ ಸುಶಾಂತ್‌, ನಿಶಾಂತ್‌, ಶುಭಶ್ರೀ ಕೂಡಲೇ ಹೊರಗೆ ಓಡಿದ್ದರಿಂದ ಅಪಾಯದಿಂದ ಪಾರಾದರು. ಮನೆಯ ಮೇಲ್ಛಾವಣಿ ಕುಸಿದು, ಗೋಡೆಗಳಲ್ಲಿ  ಬಿರುಕುಂಟಾಗಿದೆ.

ಸಹಾಯ ಬೇಕಾಗಿದೆ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಶ್ರೀನಿವಾಸ್‌ ಕೂಲಿ ಕಾರ್ಮಿಕರಾಗಿದ್ದು, ಮೂರು ತಿಂಗಳ ಹಿಂದೆಯಷ್ಟೇ ಅವರ ತಾಯಿಯೂ ತೀರಿ ಕೊಂಡಿದ್ದರು. ಶ್ರೀನಿವಾಸ್‌ ಅವರಿಂದಲೇ ಕುಟುಂಬ ನಿರ್ವಹಣೆಯಾಗ ಬೇಕಾಗಿದೆ. ಓರ್ವ ಪುತ್ರ ಅಂಗವಿಕಲ  ನಾಗಿದ್ದು, ಇಬ್ಬರು ಮಕ್ಕಳು ಶಾಲೆ ಕಲಿಯು ತ್ತಿದ್ದಾರೆ. ಪ್ರಸ್ತುತ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ.

ವಿಚಾರ ತಿಳಿದ ಕಿನ್ಯ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮಾಲಿನಿ ಮತ್ತು ಉಪಾಧ್ಯಕ್ಷ ಸಿರಾಜ್‌ ಕಿನ್ಯ ಭೇಟಿ ನೀಡಿ ಮನೆ ದುರಸ್ತಿಯಾಗುವವರೆಗೆ ಸ್ಥಳೀಯವಾಗಿ ಬೇರೆ ಮನೆಗೆ ಕುಟುಂಬವನ್ನು ಸ್ಥಳಾಂತರಿಸಿದರು. ಪಂಚಾಯತ್‌ ಮತ್ತು ಸ್ಥಳೀಯ ದಾನಿಗಳ ನೆರವಿ ನಿಂದ ಹಣ ಸಂಗ್ರಹಿಸಿ ದುರಸ್ತಿಗೆ ಯತ್ನಿಸಲಾಗುವುದು ಎಂದು ಸಿರಾಜ್‌ ಕಿನ್ಯಾ ತಿಳಿಸಿದ್ದಾರೆ.ಸ್ಥಳಕ್ಕೆ ಸಮಾಜ ಸೇವಕ ನಾರಾಯಣ ಕಜೆ, ಪಿಡಿಒ ಪೂರ್ಣಿಮಾ ಮತ್ತು ಕಂದಾಯ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next