Advertisement

Ullal: ಮಾದಕ ವಸ್ತು ಅಕ್ರಮ ಸಾಗಾಟ ಮಾಡುತ್ತಿದ್ದವನ ಸೆರೆ

11:04 PM Jan 18, 2024 | Team Udayavani |

ಉಳ್ಳಾಲ: ಮಾದಕ ವಸ್ತು ಅಕ್ರಮ ಸಾಗಾಟ ನಡೆಸುತ್ತಿದ್ದ ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಸಿಯಾಮು(26)ನನ್ನು ಎಸಿಪಿ ಧನ್ಯಾ ಎನ್‌. ನಾಯಕ್‌ ನೇತೃತ್ವದ ಆ್ಯಂಟಿ ಡ್ರಗ್‌ ಟೀಮ್‌ ಬಂಧಿಸಿದ್ದು, ಆತನಿಂದ 1.05 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಕಲ್ಲಾಪು ಯುನಿಟಿ ಹಾಲ್‌ ಬದಿಯ ಮೈದಾನದ ಬಳಿ ದಾಳಿ ನಡೆಸಿ ಸಿಯಾಮುನನ್ನು ಬಂಧಿಸಲಾಗಿದೆ. ಆ್ಯಂಟಿ ಡ್ರಗ್‌ ಟೀಮ್‌ ರಚನೆಯಾದ ಬಳಿಕ 4 ದೊಡ್ಡ ಪ್ರಕರಣ ಸೇರಿದಂತೆ 65 ಪ್ರಕರಣಗಳು ದಾಖಲಾಗಿದ್ದು, 6 ಆರೋಪಿಗಳು ಜೈಲು ಪಾಲಾಗಿದ್ದು, ಲಕ್ಷಾಂತರ ಮೌಲ್ಯದ ಗಾಂಜಾ, ಎಂಡಿಎಂಎ, ಎಲ್‌ಎಸ್‌ಡಿ ಸ್ಟಿಕ್ಕರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್‌ ಆಯುಕ್ತ ಅನುಪಮ್‌ ಅಗರವಾಲ್‌, ಉಪ ಆಯುಕ್ತರಾದ ಸಿದ್ಧಾರ್ಥ ಗೋಯಲ್‌, ದಿನೇಶ್‌ ಕುಮಾರ್‌ ನಿರ್ದೇಶನದಲ್ಲಿ ಎಸಿಪಿ ಧನ್ಯಾ ನಾಯಕ್‌ ಮತ್ತು ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಎಚ್‌.ಎನ್‌. ನೇತೃತ್ವದಲ್ಲಿ ಉಳ್ಳಾಲ ಪಿಎಸ್‌ಐ ಧನರಾಜ್‌ ಎಸ್‌., ಆ್ಯಂಟಿ ಡ್ರಗ್‌ ಟೀಮ್‌ನ ಶಾಜು ನಾಯರ್‌, ಮಹೇಶ್‌, ಆಕºರ್‌ಯಡ್ರಾಮಿ, ನವೀನ್‌ ಕೆ.ಪಿ. ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಳಚ್ಚಿಲ್‌ನಲ್ಲಿ ಗಾಂಜಾ ವ್ಯಸನಿಯ ಬಂಧನ
ಮಂಗಳೂರು: ವಳಚ್ಚಿಲ್‌ ಜಂಕ್ಷನ್‌ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಸೇವಿಸುತ್ತಿದ್ದ ಅಡ್ಯಾರ್‌ ಕಟ್ಟೆ ನಿವಾಸಿ ಮಹಮ್ಮದ್‌ ಮುನಾಜ್‌ (20)ನನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next