Advertisement

Ullal; ಗಾಂಜಾ ಮತ್ತಿನಲ್ಲಿ ದಾಂಧಲೆ; ಸೆರೆ

10:55 PM Feb 17, 2024 | Team Udayavani |

ಉಳ್ಳಾಲ: ಗಾಂಜಾ ವ್ಯಸನಿಯೋರ್ವ ನಶೆಯಲ್ಲಿ ಸಾರ್ವಜನಿಕರತ್ತ ಜಲ್ಲಿ ಕಲ್ಲೆಸೆದಿದ್ದು ತಡೆಯಲು ಹೋದ ವ್ಯಕ್ತಿಗೆ ಸೋಡಾ ಬಾಟಲಿಯಿಂದ ಹಲ್ಲೆಗೈದ ಘಟನೆ ನಡೆದಿದ್ದು, ಧಾಂದಲೆಕೋರನಿಗೆ ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.

Advertisement

ಮಂಚಿಲ ನಿವಾಸಿ ಮಹಮ್ಮದ್‌ ಮುಶಾ¤ಕ್‌ ಯಾನೆ ಮಿಸ್ತ ಶುಕ್ರವಾರ ನಶೆಯ ಮತ್ತಿನಲ್ಲಿ ತೊಕ್ಕೊಟ್ಟು ಒಳಪೇಟೆಯ ರಿಕ್ಷಾ ಪಾರ್ಕಿನ ಬಳಿಯ ರೈಲ್ವೇ ಹಳಿಯಲ್ಲಿ ನಿಂತು ಹಳಿಗಳಲ್ಲಿದ್ದ ಜಲ್ಲಿ ಕಲ್ಲುಗಳನ್ನು ರಸ್ತೆಗೆ ಎಸೆಯತ್ತಿದ್ದ. ಇದನ್ನು ಪ್ರಶ್ನಿಸಿ, ತಡೆಯಲು ಮುಂದಾದ ಸ್ಥಳೀಯ ನಿವಾಸಿ ರಾಜೇಶ್‌ ಶೆಟ್ಟಿ ಅವರ ತಲೆ ಮತ್ತು ಕೈಗೆ ಸೋಡಾ ಬಾಟಲಿಯಿಂದ ಮಿಸ್ತ ಹಲ್ಲೆಗೈದಿದ್ದಾನೆ. ತತ್‌ಕ್ಷಣ ಸಾರ್ವಜನಿಕರು ಮಿಸ್ತನನ್ನು ಹಿಡಿದು ಉಳ್ಳಾಲ ಪೊಲೀಸರಿಗೊಪ್ಪಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next