Advertisement

Ullal: ಶಾಲೆ, ಮನೆಗಳಿಗೆ ಹಾನಿ: ಕರಾವಳಿಯಾದ್ಯಂತ ಬಿರುಸಿನ ಗಾಳಿಯ ಅಬ್ಬರ

12:45 AM Jul 25, 2024 | Team Udayavani |

ಉಳ್ಳಾಲ: ಗಾಳಿ ಮಳೆಗೆ ಕಲ್ಲಾಪು ಪಟ್ಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಗೆ ಹಾನಿಯಾಗಿ ಹಂಚು ಹಾರಿ ಹೋಗಿದ್ದು, ಘಟನೆ ಸಂದರ್ಭ ವಿದ್ಯಾರ್ಥಿಗಳು ಇಲ್ಲದ ಕಾರಣ ದೊಡ್ಡ ಅವಘಡ ವೊಂದು ತಪ್ಪಿದಂತಾಗಿದೆ.

Advertisement

ಇನ್ನೊಂದು ಘಟನೆಯಲ್ಲಿ ಪಜೀರು ಗ್ರಾಮದ ಸಂಬಾರ ತೋಟದಲ್ಲಿ ಗಾಳಿ ಮಳೆಯಿಂದ ವಿದ್ಯುತ್‌ ಕಂಬಕ್ಕೆ ಮರ ಬಿದ್ದು ಮೂರು ಮನೆಗಳು ಹಾನಿಗೀಡಾಗಿವೆ‌.

ಕಲ್ಲಾಪು ಪಟ್ಲದ ಶಾಲೆಯ ಮೇಲ್ಮಹಡಿಗೆ ಹಂಚು ಹಾಕಿದ್ದು, ಗಾಳಿ ಬೀಸಿದ ಪರಿಣಾಮ ಹಂಚು ಹಾರಿ ಹೋಗಿದೆ. ಸ್ಥಳಕ್ಕೆ ಸ್ಥಳೀಯ ಕೌನ್ಸಿಲರ್‌ ಬಾಝಿಲ್‌ ಡಿ’ ಸೋಜಾ ಮತ್ತು ಉಳ್ಳಾಲ ನಗರಸಭೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕರಾವಳಿಯಾದ್ಯಂತ ಬಿರುಸಿನ ಗಾಳಿಯ ಅಬ್ಬರ
ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಗಾಳಿಯ ಅಬ್ಬರ ಜೋರಾಗಿದೆ. ಅದರಲ್ಲೂ ಅಲ್ಲಲ್ಲಿ ಏಕಾಏಕಿ ಸುಂಟರಗಾಳಿ ಬೀಸುತ್ತಿದ್ದು, ಇದರಿಂದ ಭಾರೀ ಹಾನಿ ಸಂಭವಿಸಿದೆ. ಹಲವು ಮರ, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇನ್ನೂ ಕೆಲವು ದಿನ ಆಗಾಗ್ಗೆ ರಭಸವಾಗಿ ಗಾಳಿ ಬೀಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next