ಉಳ್ಳಾಲ: ಇಸ್ಲಾಮಿನ ನಿರ್ದೇಶನ ಪಾಲನೆಯಿಂದ ಸಂತೃಪ್ತ ಕುಟಂಬ ಜೀವನ ಸಾಧ್ಯ ಎಂದು ದಕ್ಷಿಣ ಕೇರಳ ಜಮಿಯತ್ತುಲ್ ಉಲೇಮಾ ಮುಶಾವರದ ಸದಸ್ಯ ಇ.ಪಿ. ಅಬೂಬಕ್ಕರ್ ಕಾಸಿಮಿ ಉಸ್ತಾದ್ ಅವರು ಹೇಳಿದರು.
ಉಳ್ಳಾಲ ಉರೂಸ್ ಪ್ರಯುಕ್ತ ಏರ್ಪಡಿಸಿದ ಧಾರ್ಮಿಕ ಕಾರ್ಯಕ್ರಮ ವನ್ನುದ್ದೇಶಿ ಮುಖ್ಯ ಪ್ರಭಾಷಣಗೈದು ಅವರು ಮಾತನಾಡಿದರು.
ಜಲಾಲುದ್ದೀನ್ ಮದನಿ ಆಲಪಿಝೆ ಉಸ್ತಾದ್ ಮಾತನಾಡಿ, ಅಲ್ಲಾಹನ ಪ್ರವಾದಿಗಳ ಅನಂತರ ಅವರು ವಹಿಸಿದ ದೌತ್ಯವನ್ನು ನಿರ್ವಹಿಸುವವರು ಸಂತ ಶ್ರೇಷ್ಠರಾದ ಅವುಲಿಯಾ ಶಿರೋಮಣಿ ಗಳಾಗಿದ್ದಾರೆ ಎಂದು ಹೇಳಿದರು. ಶೈಖುನಾ ಉಸ್ಮಾನ್ ಫೈಝಿ ತೋಡಾರ್ ದುಆ ನೆರವೇರಿಸಿದರು.
ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಸೈಯ್ಯದ್ ಹಾದಿ ತಂಙಳ್ ಮಶೂರ್ ಮೊಗ್ರಾಲ್ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾರ್ಗದರ್ಶನ ನೀಡಿದರು.
ಪತ್ರಕರ್ತರಾದ ಕಲೀಂ ಮೂಸಾ ಸೆರಾಜೆ, ಎ.ಆರ್. ಲೋಹಾನಿ, ಉಳ್ಳಾಲ ಪುರಸಭೆ ಮಾಜಿ ಅಧ್ಯಕ್ಷ ಯು.ಎ. ಇಸ್ಮಾಯಿಲ್, ಸೈಯ್ಯದ್ ಹಝ್ರತ್, ಆವಿದ್ಯಾರ್ಥಿ ಫರ್ಹಾನ್ ಅಲಿಮೋನ್ ಅನ್ನು ಸೈಯ್ಯದ್ ಹಾದಿ ತಂಗಳ್ ಮತ್ತು ಯು.ಕೆ. ಮೋನು ಸಮ್ಮಾನಿಸಿದರು. ಉಳ್ಳಾಲ ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ ಪ್ರಸ್ತಾವಿಸಿದರು.
ಇಮಾಮ್ ಅನ್ವರ್ ಅಲಿ ದಾರಿಮಿ, ಇಬ್ರಾಹಿಂ ಮದನಿ, ಇಬ್ರಾಹಿಂ ಅಹÕನಿ, ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ. ಮೋನು, ಪ್ರಧಾನ ಕಾರ್ಯದರ್ಶಿ ತ್ವಾಹಾ, ಉಮರ್ ದಾರಿಮಿ ಸಾಲ್ಮರ, ಸಿರಾಜುದ್ದೀನ್ ಸಖಾಫಿ, ರಝಾಕ್ ಅಝ್ಹರಿ ಪಾತೂರು, ರಫೀಕ್ ಫೈಝಿ ಕನ್ಯಾನ, ಅಮೀರ್, ಆಶಿಫ್ ಅಬ್ದುಲ್ಲ, ಬಾಪುಂಞ, ಇಸ್ಮಾಯಿಲ್ ಕುತ್ತಾರ್, ಸುಲೈಮಾನ್, ಹಮೀದ್ ಕೋಡಿ, ಅಬ್ದುಲ್ ಖಾದರ್, ಅಬೂಬಕ್ಕರ್ ಮುಕ್ಕಚೇರಿ, ಹಕೀಂ ಪರ್ತಿಪ್ಪಾಡಿ, ಜಮಾಲ್, ಅಶ್ರಫ್, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.