ಉಳ್ಳಾಲ : ಅಂಗವಿಕಲರಿಗೆ ಸ್ವಾವಲಂಬಿ ಜೀವನ ನಡೆಸಲು ದ್ವಿಚಕ್ರ ವಾಹನ ಪೂರಕವಾಗಿದ್ದು, ಮಂಗಳೂರು ಕ್ಷೇತ್ರ ವ್ಯಾಪ್ತಿಯ ಇನ್ನಷ್ಟು ಅಂಗವಿಕಲ ಯುವಜನರನ್ನು ಸರ್ವೇ ನಡೆಸಿ ಅವರಿಗೆ ದ್ವಿಚಕ್ರ ವಾಹನ ಪೂರೈಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಉಳ್ಳಾಲ ನಗರಸಭಾ ಕಾರ್ಯಾಲಯದ ಬಳಿ ಗುರುವಾರ ಶಾಸಕರ ನಿಧಿಯಡಿ ಮಂಗಳೂರು ವಿಧಾನಸಬಾ ಕ್ಷೇತ್ರದ 13 ಮಂದಿ ಫಲಾನುಭವಿ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿ ಮಾತನಾಡಿದರು. ಕಳೆದ ವರ್ಷ ಮೂವರು ಫಲಾನುಭವಿಗಳಿಗೆ ದ್ವಿಚಕ್ರ ವಾಹನ ನೀಡಲಾಗಿತ್ತು. ಅಂಗವಿಕಲರ ಬೇಡಿಕೆಯಂತೆ ಹೆಚ್ಚಿನ ದ್ವಿಚಕ್ರ ವಾಹನವನ್ನು ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಅಂಗವಿಕಲರ ಸ್ವಾವಲಂಬಿ ಜೀವನ ನಡೆಸುವ ಉದ್ಧೇಶದಿಂದ ಅವರಿಗೆ ಸರಕಾರದಿಂದ ಸಿಗುವ ಸವಲತ್ತು ನೀಡಲು ಸರಕಾರ ಬದ್ಧವಾಗಿದ್ದು, ದ್ವಿಚಕ್ರ ವಾಹನವನ್ನು ವಿಶೇಷ ಅನುದಾನದಿಂದ ನೀಡಲಾಗಿದೆ ಎಂದರು.
ಈ ಸಂದರ್ಭ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ಜಬ್ಟಾರ್ ಬೋಳಿಯಾರ್, ಮುಖಂಡರಾದ ಸುರೇಶ್ ಭಟ್ನಗರ, ದಿನೇಶ್ ಕುಂಪಲ, ಆಹಮ್ಮದ್ ಬಾವಾ ಕೊಟ್ಟಾರ, ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿರಾಜ್ ಕಿನ್ಯ, ನಾಗೇಶ್ ಶೆಟ್ಟಿ ತೊಕ್ಕೊಟ್ಟು, ಕೌನ್ಸಿಲರ್ ಗಳಾದ ಬಾಝಿಲ್ ಡಿ’ಸೋಜಾ, ಭಾರತಿ, ರವಿಚಂದ್ರ ಗಟ್ಟಿ, ಆಯೂಬ್ ಮಂಚಿಲ, ದೀಕ್ಷಿತಾ, ವೀಣಾ ಡಿ’ಸೋಜಾ, ಮಹಮ್ಮದ್ ಮುಕ್ಕಚ್ಚೇರಿ, ಶಶಿಕಲಾ, ಬಶೀರ್, ಜಬ್ಟಾರ್, ಮಮತಾ, ಮಾಜಿ ಕೌನ್ಸೆಲರ್‌ರಾದ ಪೊಡಿ ಮೋನು, ಮಹಮ್ಮದ್ ಮುಸ್ತಫಾ, ರವಿ ಗಾಂಧಿನಗರ, ಎಪಿಎಂಸಿ ಮಾಜಿ
ಅಧ್ಯಕ್ಷ ಪ್ರಶಾಂತ್ ಗಟ್ಟಿ ಬೋಳಿಯಾರ್ ಮತ್ತಿತರರು ಉಪಸ್ಥಿತರಿದ್ದರು.