Advertisement

ಐತಿಹಾಸಿಕ ಸ್ಥಳ ರಕ್ಷಣೆಗೆ “ಬ್ಲೂ ಎಂಬ್ಲೆಮ್‌ ಶೀಲ್ಡ್‌’

08:58 PM Mar 09, 2022 | Team Udayavani |

ರಷ್ಯಾದಿಂದ ದಾಳಿಗೆ ತುತ್ತಾಗಿರುವ ಉಕ್ರೇನ್‌ನಲ್ಲಿ ಇರುವ ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿರುವ ವಸ್ತುಗಳು ಮತ್ತು ಪ್ರದೇಶಗಳನ್ನು ರಕ್ಷಿಸುವುದೇ ಈಗ ಯುನೆಸ್ಕೋಗೆ ಸವಾಲಿನ ವಿಚಾರವಾಗಿ ಪರಿಣಮಿಸಿದೆ. ಅದರಲ್ಲಿ “ಬ್ಲೂ ಎಂಬ್ಲೆಮ್‌ ಶೀಲ್ಡ್‌’ ಅನ್ನು ಬಳಕೆ ಮಾಡಲು ತೀರ್ಮಾನಿಸಲಾಗಿದೆ.

Advertisement

ಅವುಗಳ ಮಹತ್ವವನ್ನು ಮತ್ತೊಮ್ಮೆ ಗುರುತಿಸಿ, ಪ್ರತ್ಯೇಕಿಸುವುದೇ ಸಾಹಸದ ಕಾರ್ಯವಾಗಿ ಪರಿಣಮಿಸಲಿದೆ ಎಂದು ಯುನೆಸ್ಕೋದ ಮಹಾ ನಿರ್ದೇಶಕ ಆಡ್ರಿ ಅಝುಲೇ ತಿಳಿಸಿದ್ದಾರೆ.

1954ರಲ್ಲಿ ದ ಹೇಗ್‌ನಲ್ಲಿ ಅಂಗೀಕರಿಸಲಾಗಿದ್ದ ನಿರ್ಣಯದಂತೆ ಯುದ್ಧ ಮತ್ತು ಇತರ ಪ್ರಕ್ಷುಬ್ದ ವಾತಾವರಣದ ಸಂದರ್ಭದಲ್ಲಿ ಸಾಂಸ್ಕೃತಿಕ ಮತ್ತು ಇತಿಹಾಸದಲ್ಲಿ ಪ್ರಮುಖವಾದದ್ದು ಎಂದು ಪರಿಗಣಿಸಲಾಗಿರುವ ಸ್ಥಳಗಳನ್ನು ರಕ್ಷಿಸಲು “ಬ್ಲೂ ಶೀಲ್ಡ್‌ ಎಂಬ್ಲೆಮ್‌’ ಅನ್ನು ಬಳಕೆ ಮಾಡಲು ತೀರ್ಮಾನಿಸಲಾಗಿದೆ.

ವಿಶ್ವಸಂಸ್ಥೆಯ ಸಂಶೋಧನಾ ತರಬೇತಿ ಸಂಸ್ಥೆ (ಯುಎನ್‌ಐಟಿಎಆರ್‌) ಜತೆಗೂಡಿ ಉಪಗ್ರಹದಿಂದ ಪಡೆದಿರುವ ಛಾಯಾಚಿತ್ರಗಳನ್ನು ಪರಿಶೀಲಿಸಿ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸ್ಥಳಗಳ ಮೇಲೆ ನಡೆಸಲಾಗಿರುವ ದಾಳಿ ಮತ್ತು ಹಾನಿಯನ್ನು ಪರಿಶೀಲಿಸಲಾಗುತ್ತದೆ ಎಂದು ಮಹಾನಿರ್ದೇಶಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next