ಕೀವ್/ಮಾಸ್ಕೊ: ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ತಲೆದೋರುವ ಭೀತಿ ಹೆಚ್ಚಾಗುತ್ತಿರುವಂತೆಯೇ ಆ ಭೀತಿಯನ್ನು ನಿವಾರಿಸಲು ಉಕ್ರೇನ್ ಖುದ್ದಾಗಿ ಹೆಜ್ಜೆ ಯಿಟ್ಟಿದೆ.
ತನ್ನ ಸ್ವಾಭಿಮಾನವನ್ನು ಬದಿಗಿಟ್ಟಿರುವ ಅದು, ರಷ್ಯಾಕ್ಕೆ ಶಾಂತಿ ಸಂಧಾನದ ಪ್ರಸ್ತಾವನೆಯನ್ನು ಕಳುಹಿಸಿ ಕೊಟ್ಟಿದೆ. ಈ ವಿಷಯವನ್ನು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರಿ ಕುಲೇಬಾ ತಿಳಿಸಿದ್ದಾರೆ.
ಪ್ರಸ್ತಾವನೆಗೆ 48 ಗಂಟೆಗಳಲ್ಲಿ ಸ್ಪಂದಿಸುವಂತೆ ಉಕ್ರೇನ್, ರಷ್ಯಾಕ್ಕೆ ಸೂಚಿಸಿದೆ. ಜತೆಗೆ 2011ರಲ್ಲಿ ಐರೋಪ್ಯ ರಾಷ್ಟ್ರಗಳ ಭದ್ರತೆ, ಸಹಕಾರಕ್ಕಾಗಿ ರೂಪಿಸ ಲಾಗಿದ್ದ ವಿಯೆನ್ನಾ ದಾಖಲೆಗಳಿಗೆ ಸಹಿ ಹಾಕಿದ ಎಲ್ಲ ರಾಷ್ಟ್ರಗಳಿಗೂ ಸಭೆಗೆ ಹಾಜರಾಗುವಂತೆ ಉಕ್ರೇನ್ ಸೂಚಿಸಿದೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 7 ಹೊಸ ಸರ್ಕಾರಿ ಆಸ್ಪತ್ರೆ
ವಿಶ್ವಬ್ಯಾಂಕ್ ಸಿಬಂದಿ ಸ್ಥಳಾಂತರ: ಉಕ್ರೇನ್‌ನಲ್ಲಿರುವ ವಿಶ್ವ ಬ್ಯಾಂಕ್‌ನ ಶಾಖಾ ಕಚೇರಿಯ ಸಿಬಂದಿಯನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ ಉಕ್ರೇನ್‌ನಲ್ಲಿನ ತನ್ನೆಲ್ಲ ವ್ಯವಹಾರಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವು ದಾಗಿ ವಿಶ್ವ ಬ್ಯಾಂಕ್ ತಿಳಿಸಿದೆ.
1 ಲಕ್ಷಕ್ಕೂ ಹೆಚ್ಚಿನ ಸೈನಿಕರು: ಉಕ್ರೇನ್‌ನ ಗಡಿಯ ಬಳಿ ರಷ್ಯಾವು ತನ್ನ 1 ಲಕ್ಷದ 30 ಸಾವಿರ ಸೈನಿಕರನ್ನು ನಿಯೋ ಜಿಸಿದೆ ಎಂದು ಅಮೆರಿಕ ಹೇಳಿದೆ. ಇದಕ್ಕೆ ಪ್ರತಿ ಯಾಗಿ ನ್ಯಾಟೋ ಪಡೆಗಳೂ ತಮ್ಮ ಸೇನಾ ತುಕಡಿಗಳನ್ನು ಅಗತ್ಯ ಪ್ರಮಾಣದಲ್ಲಿ ಉಕ್ರೇನ್‌ನ ಅಕ್ಕಪಕ್ಕದ ದೇಶಗಳ ಗಡಿ ಗಳಲ್ಲಿ ನಿಯೋಜಿಸಿದೆ ಎಂದು ಅಮೆರಿಕ ತಿಳಿಸಿದೆ.