Advertisement

“ಡಿಜಿಟಲ್‌ ಆರ್ಮಿ’ಕಟ್ಟಿದ ಫೆಡೊರೊವ್‌

12:02 AM Mar 07, 2022 | Team Udayavani |

ಕೀವ್‌: ಉಕ್ರೇನ್‌ನ ಯೋಧರು, ರಷ್ಯಾದ ಮೇಲೆ ಭೂಮಿ ಹಾಗೂ ವಾಯು ಮಂಡಲಗಳಲ್ಲಿ ಸೆಣಸುತ್ತಿದ್ದರೆ, ರಾಜಧಾನಿ ಕೀವ್‌ ನಗರದ ಬಂಕರ್‌ ಒಂದರಲ್ಲಿ ಆಶ್ರಯ ಪಡೆದಿರುವ ಆ ದೇಶದ ಡಿಜಿಟಲ್‌ ಟ್ರಾನ್ಸ್‌ಫಾರ್ಮೇಶನ್‌ ಇಲಾಖೆಯ ಸಚಿವ ಮಿಖಾಯಿಲೋ ಫೆಡೊರೊವ್‌ (31), ತಮ್ಮಲ್ಲಿನ ಮೊಬೈಲ್‌ ಫೋನ್‌ನಿಂದ ರಷ್ಯಾ ವಿರುದ್ಧ ಸೈಬರ್‌ ದಾಳಿ ನಡೆಸಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳ ಮೂಲಕ ಅಮೆರಿಕ ಹಾಗೂ ಇನ್ನಿತರ ಉಕ್ರೇನ್‌ ಸ್ನೇಹಿ ರಾಷ್ಟ್ರಗಳಲ್ಲಿರುವ ದೈತ್ಯ ಐಟಿ ಕಂಪೆನಿಗಳ ಮುಖ್ಯಸ್ಥರನ್ನು ಸಂಪರ್ಕಿಸಿ, ರಷ್ಯಾದೊಂದಿಗೆ ತಮ್ಮ ಬಾಂಧವ್ಯವನ್ನು ಕಡಿದುಕೊಂಡು, ಉಕ್ರೇನ್‌ನಲ್ಲಿ ಇಂಟರ್ನೆಟ್‌ ಸೇರಿದಂತೆ ಹಲವಾರು ಸೇವೆಗಳನ್ನು ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಉಕ್ರೇನ್‌ನ ಮೇಲೆ ಅನುಕಂಪವಿರುವ ಆ ರಾಷ್ಟ್ರಗಳ ಕಂಪೆನಿಗಳ ಮುಖ್ಯಸ್ಥರು, ಫೆಡೊರೊವ್‌ ಮಾತಿಗೆ ಓಗೊಟ್ಟಿದ್ದಾರೆ. ಈ ಮೂಲಕ, ತಮ್ಮ ಮೊಬೈಲ್‌ ಫೋನಿನಿಂದ ರಷ್ಯಾ ವಿರುದ್ಧ ಡಿಜಿಟಲ್‌ ಸೇನೆ ಯೊಂದನ್ನು ಕಟ್ಟಿದ್ದಾರೆ ಫೆಡೊರೊವ್‌.

Advertisement

Udayavani is now on Telegram. Click here to join our channel and stay updated with the latest news.

Next