ಕೀವ್: ಉಕ್ರೇನ್ ಮೇಲೆ ಸತತವಾಗಿ ದಾಳಿ ನಡೆಸುತ್ತಿದ್ದ ರಷ್ಯಾ ಇದೀಗ ಒಂದೊಂದೇ ನಗರದಿಂದ ಹಿಂದೆ ಸರಿಯಲಾರಂಭಿಸಿದೆ.
ಖಾರ್ಕಿವ್ ಪ್ರಾಂತ್ಯದ ಪ್ರಮುಖ ನಗರ ಇಜಿಯಮ್‌ನಿಂದ ಶನಿವಾರ ಯೋಧರಿಗೆ ಹಿಂದೆ ಸರಿಯುವುದಕ್ಕೆ ರಷ್ಯಾ ರಕ್ಷಣಾ ಸಚಿವಾಲಯ ಆದೇಶಿಸಿದೆ.
ಶನಿವಾರ ಬಳಗ್ಗೆ ಉಕ್ರೇನ್‌ನ ರೈಲ್ವೆ ಹಬ್ ಎಂದೇ ಕರೆಸಿಕೊಳ್ಳುವ ಕುಪಿಯಂನ್ಸ್ ನಗರವನ್ನು ಉಕ್ರೇನ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಅದರ ಬೆನ್ನಲ್ಲೇ ರಷ್ಯಾ ಇನ್ನೊಂದು ಹೆಜ್ಜೆ ಹಿಂದೆ ಇಟ್ಟಿದೆ.
ಇದೇ ವೇಳೆ ಕೆಲ ವಾರಗಳ ಹಿಂದೆ ಬಾಹ್ಯ ಸಂಪರ್ಕವನ್ನೇ ಕಳೆದುಕೊಂಡಿದ್ದ ಉಕ್ರೇನ್‌ನ ಝಪೋರ್‌ಝಿಯಾ ಅಣು ಸ್ಥಾವರವು ಈಗ ಮತ್ತೆ ವಿದ್ಯುತ್ ಜಾಲದೊಂದಿಗೆ ಸಂಪರ್ಕ ಪಡೆದುಕೊಂಡಿದೆ.
ಹಾಗಾಗಿ ಅಲ್ಲಿನ ಆಪರೇಷನಲ್ ರಿಯಾಕ್ಟರ್ ಅನ್ನು ಸ್ಥಗಿತಗೊಳಿಸಲಾಗಿದೆ. ರಷ್ಯಾ ಪಡೆಯು ಉಕ್ರೇನ್ ಮೇಲೆ ದಾಳಿ ಆರಂಭಿಸಿ ಭಾನುವಾರಕ್ಕೆ 200 ದಿನಗಳು ಪೂರ್ಣಗೊಂಡಿವೆ.