Advertisement

ಉಕ್ರೇನ್‌ ಯುದ್ಧ ಕೊನೆಗಾಣಿಸಿ: ರಷ್ಯಾಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ಮನವಿ

10:37 PM Jul 01, 2022 | Team Udayavani |

ನವದೆಹಲಿ: ಸೂಕ್ತವಾದ ರಾಜತಾಂತ್ರಿಕ ನಡೆಗಳ ಮೂಲಕ, ಮಾತುಕತೆಗಳ ಮೂಲಕ ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧವನ್ನು ಕೊನೆಗಾಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದ ಅಧ್ಯಕ್ಷ ಪುಟಿನ್‌ ಅವರಲ್ಲಿ ಮನವಿ ಮಾಡಿದ್ದಾರೆ.

Advertisement

ಶುಕ್ರವಾರದಂದು ಇಬ್ಬರೂ ನಾಯಕರು ದೂರವಾಣಿಯಲ್ಲಿ ಪರಸ್ಪರ ಮಾತುಕತೆ ನಡೆಸಿದ್ದು, 2021ರಲ್ಲಿ ಪುಟಿನ್‌ ಅವರು ಭಾರತಕ್ಕೆ ಬಂದಿದ್ದಾಗ ಉಭಯ ದೇಶಗಳ ನಡುವೆ ಮಾಡಿಕೊಳ್ಳಲಾಗಿದ್ದ ಒಪ್ಪಂದಗಳ ಅನುಷ್ಠಾನದ ಬಗ್ಗೆ ಚರ್ಚಿಸಿದರು. ಎರಡೂ ದೇಶಗಳ ನಡುವೆ, ಕೃಷಿ ಉತ್ಪನ್ನಗಳು, ರಸಗೊಬ್ಬರ, ಔಷಧ ಸಾಮಗ್ರಿಗಳ ವ್ಯಾಪಾರಕ್ಕಾಗಿ ಒಪ್ಪಂದವಾಗಿತ್ತು. ಈ ಒಪ್ಪಂದವನ್ನು ಮತ್ತಷ್ಟು ಉನ್ನತ ದರ್ಜೆಗೆ ಏರಿಸುವ ಅವಶ್ಯಕತೆಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.

ಇದೇ ವೇಳೆ ಉಕ್ರೇನ್‌ ಮೇಲೆ ರಷ್ಯಾ ನಡೆಸಿರುವ ದಾಳಿಯ ವಿಚಾರವನ್ನು ಮೋದಿಯವರು ಪ್ರಸ್ತಾಪಿಸಿದರು. ಎರಡೂ ದೇಶಗಳ ನಡುವಿನ ಯುದ್ಧದಿಂದಾಗಿ ಜಾಗತಿಕ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಜೊತೆಗೆ, ವಿಶ್ವಮಟ್ಟದಲ್ಲಿ ಆಹಾರ ಹಣದುಬ್ಬರಕ್ಕೂ ಅದು ನಾಂದಿ ಹಾಡಿದೆ.

ಹಾಗಾಗಿ, ಯುದ್ಧವನ್ನು ಬೇಗನೇ ಮುಕ್ತಾಯ ಮಾಡಬೇಕೆಂದು ಅವರು ಪುಟಿನ್‌ ಅವರಲ್ಲಿ ಮನವಿ ಮಾಡಿದರೆಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next