Advertisement

ಯುಕೆಪಿ ರಾಷ್ಟ್ರೀಯ ಯೋಜನೆಯಾಗಲಿ

05:18 PM Mar 07, 2021 | Team Udayavani |

ಬಸವನಬಾಗೇವಾಡಿ: ಜಿಲ್ಲೆಯ ಕೃಷ್ಣಾನದಿ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ರೈತರಿಂದ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ಬೆಳಗ್ಗೆ ಬಸವೇಶ್ವರ ದೇವಸ್ಥಾನದಲ್ಲಿ ಜಮಾಯಿಸಿದ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಜಿಲ್ಲೆಯಿಂದ ಆಗಮಿಸಿದ ನೂರಾರು ರೈತರು ಕೃಷ್ಣಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯಸರಕಾರದ ವಿರುದ್ಧ ಘೋಷಣೆ ಕೂಗುತ್ತ ಮನಗೂಳಿ- ಬಿಜ್ಜಳ ರಾಜ್ಯ ಹೆದ್ದಾರಿ ಮೂಲಕ ತಹಶೀಲ್ದಾರ್‌ ಕಚೇರಿಗೆ ತೆರಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ಈ ವೇಳೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಹಲವಾರು ದಶಕಗಳ ಹಿಂದೆ ಆಲಮಟ್ಟಿ ಆಣೆಕಟ್ಟು ನಿರ್ಮಿಸಿ ಈ ಭಾಗದ ರೈತರಿಗೆ ನೀರಾವರಿ ಯೋಜನೆ ಕಲ್ಪಿಸಬೇಕೆಂದು ಯೋಜನೆ ಹಾಕಲಾಗಿತ್ತು. ಆದರೆ ವಿಜಯಪುರ- ಬಾಗಲಕೋಟೆ ಅವಳಿ  ಜಿಲ್ಲೆಯ ರೈತರ ಫಲವತ್ತಾದ ಲಕ್ಷಾಂತರ ಭೂಮಿ ಮನೆ ಮಠ ಕಳೆದುಕೊಂಡರು ಇನ್ನೂ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದರು.

ಆಲಮಟ್ಟಿ ಆಣೆಕಟ್ಟು 524 ಮೀ.ಗೆ ನೀರು ನಿಲ್ಲಿಸಿದಾಗ ಜಿಲ್ಲೆಯ ಕೃಷ್ಣಾ ಕೊಳದ ಅನೇಕ ನೀರಾವರಿ ಯೋಜನೆಗಳು ಜಾರಿಗೊಳ್ಳಲು ಸಾಧ್ಯ. ಆದರೆ 524 ಮೀ.ಗೆ ನೀರು ನಿಲ್ಲಿಸಬೇಕಾದರೆ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆಗೊಳ್ಳಲಿದೆ. ಲಕ್ಷಾಂತರ ಎಕರೆ ಜಮೀನು ಕೂಡಾ ಮುಳಗಡೆಯಾಗುವ ಸಾಧ್ಯತೆ ಇದೆ. ಆದರೆ ರಾಜ್ಯ ಸರಕಾರಕ್ಕೆ ಈ ಮುಳಗಡೆ ಪ್ರದೇಶದ ಜನರಿಗೆ ಸಾವಿರಾರು ಕೋಟಿ ಪರಿಹಾರ ನೀಡಲು ಅಸಾಧ್ಯದ ಮಾತು. ಆದ್ದರಿಂದ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರ ತಕ್ಷಣ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಇಲ್ಲವಾದರೆ ಅವಳಿ ಜಿಲ್ಲೆಯ ರೈತರು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾದ ಅನಿರ್ವಾತೆ ನಿರ್ಮಾಣವಾಗುತ್ತದೆ. ಮುಂದಾಗುವ ಅನಾಹುತಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ರಾಜ್ಯದಲ್ಲಿ ರೈತರು ತಮ್ಮ ಜಮೀನು ಹೊಲ ಗದ್ದೆಗಳಿಗೆ ತೆರಳಬೇಕಾದರೆ ದಾರಿ ಸಮಸ್ಯೆ ಇದ್ದು. ರಾಜ್ಯ ಸರಕಾರ ತಕ್ಷಣ ದಾರಿ ಸಮಸ್ಯೆ ಪರಿಹರಿಸಬೇಕು. ದಾರಿ ಸಮಸ್ಯೆಯಿಂದ ರೈತರು ಬೆಳೆದ ಬೆಳೆಗಳು  ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಹಾಳಾದ ಉದಾಹರಣೆಗಳು ಇವೆ. ರಾಜ್ಯ ಸರಕಾರ ರೈತರ ಜಮೀನುಗಳ ದಾರಿ ಸಮಸ್ಯೆಯನ್ನು ಪರಿಹರಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ಚಂದ್ರಾಮ ತೆಗ್ಗಿ, ವಿಠಲ ಬಿರಾದಾರ, ಹೊಣಕೇರಪ್ಪ ತೆಲಗಿ, ಚನ್ನಬಸಪ್ಪ ಸಿಂಧೂರ, ಕೃಷ್ಣಪ್ಪ ಬಮರಡ್ಡಿ, ಕಲ್ಲಪ್ಪ ಸಜ್ಜನ, ಶಾಂತಪ್ಪ ಸಜ್ಜನ, ರಾಜೇಸಾಬ ವಾಲೀಕಾರ, ವಿಠuಲ ಬಿರಾದಾರ, ಸಿದ್ದಪ್ಪಾ ಮುರಾಳ, ಸುಭಾಷ್‌ಗೌಡ ಬಿರಾದಾರ, ಹೊನಕೇರಪ್ಪ ತೆಲಗಿ, ಶೇಖಪ್ಪ ಕರಾಬಿ, ಶರಣಪ್ಪ ಹೂಗಾರ, ದಾವುಲಸಾಬ ನದಾಫ್‌, ಕಲ್ಲಪ್ಪ ಸಜ್ಜನ, ಈರಣ್ಣ ದೇವರಗುಡಿ, ಶಟ್ಟೆಪ್ಪ ಲಮಾಣಿ, ಸಿದ್ದಪ್ಪ ಕಲಬಿಳಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next