Advertisement

ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡಕ್ಕೆ ಕ್ಷಮೆ: ಬ್ರಿಟನ್‌ ಚಿಂತನೆ

12:18 PM Feb 20, 2019 | udayavani editorial |

ಲಂಡನ್‌ : 1919ರ ಎಪ್ರಿಲ್‌ 13ರಂದು ಪಂಜಾಬಿನ ಜಲಿಯನ್‌ವಾಲಾ ಬಾಗ್‌ನಲ್ಲಿ  ವೈಶಾಖೀ ಹಬ್ಬದ ಆಚರಣೆ ಸಲುವಾಗಿ ಸೇರಿದ್ದ ಜನಸ್ತೋಮದ ಮೇಲೆ ಜನರಲ್‌ ಡಯರ್‌ ಗುಂಡಿನ ಸುರಿಮಳೆ  ಗೈದು ನಡೆಸಿದ್ದ ಭಾರೀ ನರಮೇಧಕ್ಕೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಆ ಐತಿಹಾಸಿಕ ಹತ್ಯಾಕಾಂಡಕ್ಕೆ ಕ್ಷಮೆಯಾಚಿಸಲು ಮತ್ತು ಅತ್ಯಂತ ಗೌರವಯುತ  ಶತಮಾನಾಚರಣೆ ನಡೆಸಲು ಬ್ರಿಟನ್‌ ಸರಕಾರ ಚಿಂತನೆ ನಡೆಸುತ್ತಿದೆ.

Advertisement

ಬ್ರಿಟನ್‌ ಸಂಸತ್ತಿನ ಕೆಳಮನೆಯಲ್ಲಿ ಅಮೃತಸರ ನರಮೇಧ : ಶತಮಾನ ವಿಷಯದ ಮೇಲಿನ ಚರ್ಚೆಯಲ್ಲಿ ಸರಕಾರಿ ವಿಪ್‌ ಆಗಿರುವ ಬ್ಯಾರೋನೆಸ್‌ ಅನಾಬೆಲ್‌ ಗೋಲ್ಡಿ ಅವರು ಈ ವಿಷಯವನ್ನು ದೃಢೀಕರಿಸಿದರು. 

ಜಲಿಯಾನ್‌ವಾಲಾ ಬಾಗ್‌ ಹತ್ಯಾಕಾಂಡದ ಬಳಿಕ ಆಗಿನ ಬ್ರಿಟಿಷ್‌ ರಾಜ್‌ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿತ್ತು. ಆದರೆ ಅನಂತರ ಯಾವುದೇ ಬ್ರಿಟಿಷ್‌ ಸರಕಾರ ಅಧಿಕೃತವಾಗಿ ಕ್ಷಮೆಯಾಚಿಸಿಲ್ಲ ಎಂದು ಬ್ಯಾರೋನೆಸ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next