Advertisement

ಬೆಂಗಳೂರಿಗೂ ಕಾಲಿಡ್ತು ಯುಕೆ ವೈರಸ್! ಹತ್ತು ದಿನವಾದರೂ ಪತ್ತೆಯಾಗಿಲ್ಲ 361 ಪ್ರಯಾಣಿಕರು!

11:40 AM Dec 29, 2020 | keerthan |

ಬೆಂಗಳೂರು: ಬ್ರಿಟನ್ ನಿಂದ ಆಗಮಿಸಿದ ಮೂವರಲ್ಲಿ ಹೊಸ ರೂಪಾಂತರಿ ಕೋವಿಡ್ ಸೋಂಕು ಕಂಡುಬಂದಿದೆ. ದೇಶದಲ್ಲಿ ಒಟ್ಟು ಆರು ಜನರಲ್ಲಿ ಈ ರೂಪಾಂತರಿ ವೈರಸ್ ಕಂಡುಬಂದಿದ್ದು, ಇವರಲ್ಲಿ ಮೂರು ಪ್ರಕರಣಗಳು ಬೆಂಗಳೂರಿನಲ್ಲೇ ಕಂಡು ಬಂದಿದೆ.

Advertisement

ಬ್ರಿಟನ್ ರೂಪಾಂತರ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಡಿ. 1 ರಿಂದೀಚೆಗೆ ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದ 2,127 ಪ್ರಯಾಣಿಕರ ಸೋಂಕು ಪರೀಕ್ಷೆಗೆ ಡಿ.21 ರಂದು ರಾಜ್ಯ ಸರ್ಕಾರ ಸೂಚಿಸಿತ್ತು.

ಇದನ್ನೂ ಓದಿ:ಬೆಂಗಳೂರಿಗೆ ಬಂದ ಮೂರವರಲ್ಲಿ ಬ್ರಿಟನ್ ರೂಪಾಂತರಿ ಕೋವಿಡ್ ವೈರಸ್ ಪತ್ತೆ!

ಈವರೆಗೂ 1766 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಬಾಕಿ 361 ಪ್ರಯಾಣಿಕರು ಪತ್ತೆಯಾಗಿಲ್ಲ. ಈಗಾಗಲೇ ಪ್ರಯಾಣಿಕರ ಪತ್ತೆ ಕಾರ್ಯ ಆರಂಭವಾಗಿ ಹತ್ತು ದಿನವಾದರೂ ಎಲ್ಲಾ ಪ್ರಯಾಣಿಕರ ಪತ್ತೆಯಾಗದಿರುವುದು ಇಲಾಖೆ ನಿರ್ಲಕ್ಷ್ಯವನ್ನು ಎತ್ತಿಹಿಡಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next