ಲಂಡನ್: ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಸವಾರಿ ಮಾಡಿದ್ದಕ್ಕಾಗಿ ಬ್ರಿಟಿಷ್ ಪೊಲೀಸರು ಶುಕ್ರವಾರ ಪ್ರಧಾನಿ ರಿಷಿ ಸುನಕ್ ಅವರಿಗೆ ದಂಡ ವಿಧಿಸಿದ್ದಾರೆ.
ರಿಷಿ ಸುನಕ್, ಸೀಟ್ ಬೆಲ್ಟ್ ಧರಿಸದೆ ಉತ್ತರ ಇಂಗ್ಲೆಂಡ್ ನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಕಾರಿನ ಹಿಂದಿನ ಸೀಟಿನಲ್ಲಿ ವೀಡಿಯೊವನ್ನು ಚಿತ್ರೀಕರಿಸಿದ್ದರು. ಗುರುವಾರ ಸುನಕ್ ಇದಕ್ಕಾಗಿ ಕ್ಷಮೆಯಾಚಿಸಿದರು.
ಇದನ್ನೂ ಓದಿ:ಹೀಗೊಂದು ಲವ್ ಸ್ಟೋರಿ; ಕೆಳಗಿನ ಮನೆ ಆಂಟಿ ಜೊತೆಗೆ ಮೇಲಿನ ಮನೆ ಅಂಕಲ್ ಜೂಟ್!
“ಲಂಕಾಶೈರ್ ನಲ್ಲಿ ಚಲಿಸುವ ಕಾರಿನಲ್ಲಿ ಪ್ರಯಾಣಿಕರೊಬ್ಬರು ಸೀಟ್ ಬೆಲ್ಟ್ ಧರಿಸದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ ನಾವು ಇಂದು ಲಂಡನ್‌ನಿಂದ 42 ವರ್ಷದ ವ್ಯಕ್ತಿಗೆ ದಂಡ ವಿಧಿಸಿದ್ದೇವೆ” ಲಂಕಾಶೈರ್ ಪೊಲೀಸರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.