ಲಂಡನ್: ಯುಕೆ ಪ್ರಧಾನಿ ಹುದ್ದೆಗಾಗಿ ಭಾರತ ಮೂಲದ ರಿಷಿ ಸುನಕ್ ಮತ್ತು ವಿದೇಶಾಂಗ ಸಚಿವೆ ಲಿಝ್ ಟ್ರಾಸ್ ನಡುವೆ ಭಾರೀ ಪೈಪೋಟಿ ಆರಂಭವಾ ಗಿದ್ದು, ಮಂಗಳವಾರ ನಡೆದ ಮೊದಲ ಮುಖಾಮುಖೀ ಟಿವಿ ಡಿಬೇಟ್‌ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಮೀರಿಸು ವಂತೆ ಮಾತನಾಡಿದ ಕಾರಣ, ಯಾರಿಗೂ ಸ್ಪಷ್ಟ ಜಯ ಸಿಗಲಿಲ್ಲ.
ತಮ್ಮ ತಮ್ಮ ಆರ್ಥಿಕ ನೀತಿಗಳು ಮತ್ತು ತೆರಿಗೆ ಪ್ಲ್ರಾನ್‌ಗಳ ಕುರಿತು ಸುನಕ್ ಮತ್ತು ಟ್ರಾಸ್ ನಡುವೆ ಬಿರು ಸಿನ ಚರ್ಚೆ ನಡೆ ದಿದೆ. ಸೋಮವಾರ ರಾತ್ರಿ ಆರಂಭವಾದ ಬಿಬಿಸಿ ಡಿಬೇಟ್‌ನಲ್ಲಿ ಯಾರು ಚೆನ್ನಾಗಿ ಮಾತನಾಡಿದ್ದಾರೆ ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಅದರ ಪ್ರಕಾರ ಸುನಕ್ ಅವರು ಶೇ.39ರಷ್ಟು ಮತಗಳನ್ನು ಗಳಿಸಿದರೆ, ಟ್ರಾಸ್ ಕೇವಲ ಶೇ.1 ಮತಗಳಿಂದ ಹಿಂದಿದ್ದಾರೆ.
ಅಂದರೆ, ಟ್ರಾಸ್‌ಗೆ ಶೇ.38ರಷ್ಟು ಮತಗಳು ದೊರೆತಿವೆ. ಆದರೆ, ಕನ್ಸರ್ವೇಟಿವ್ ಪಾರ್ಟಿ ವೋಟರ್‌ಗಳನ್ನು ಪ್ರಶ್ನಿಸಿದಾಗ, ಶೇ.47ರಷ್ಟು ಮಂದಿ ಟ್ರಾಸ್ ಪರ ಮಾತನಾಡಿದರೆ, ಶೇ.38ರಷ್ಟು ಮಂದಿ ಸುನಕ್ ಉತ್ತಮ ವಾಗ್ಮಿ ಎಂದು ಬಣ್ಣಿಸಿ ದ್ದಾರೆ. ಒಟ್ಟಾರೆಯಾಗಿ, ಈ ಇಬ್ಬರು ಫೈನಲಿಸ್ಟ್‌ಗಳಲ್ಲಿ ಯಾರು ಬೆಸ್ಟ್ ಎಂಬುದನ್ನು ನಿರ್ಧರಿಸಲು ಬ್ರಿಟನ್ ವಾಸಿಗಳಿಗೆ ಸಾಧ್ಯವಾಗಿಲ್ಲ.
ತೆರಿಗೆ ಜಗಳ: ತೆರಿಗೆ ಕಡಿತ ಯೋಜನೆಯು ಬ್ರಿಟನ್‌ನ ಲಕ್ಷಾಂತರ ಮಂದಿಯನ್ನು ಸಂಕಷ್ಟಕ್ಕೆ ದೂಡಲಿದೆ ಮಾತ್ರವಲ್ಲ ಮುಂದಿನ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದು ಸುನಕ್ ವಾದಿಸಿದ್ದಾರೆ.
ಆದರೆ, ಇದನ್ನು ಒಪ್ಪದ ಟ್ರಾಸ್, “ತೆರಿಗೆ ಹೆಚ್ಚಳ ಮಾಡುವ ನಿಮ್ಮ ಯೋಜನೆಯಿಂದ ದೇಶವು ಆರ್ಥಿಕ ಹಿಂಜರಿತದತ್ತ ಹೋಗುವುದು ನಿಶ್ಚಿತ’ ಎಂದು ಹೇಳಿದ್ದಾರೆ.