ಹೊಸದಿಲ್ಲಿ: ಯುನೈಟೆಡ್ ಕಿಂಗ್‌ಡಂನ ಪ್ರಧಾನಿ ಬೋರಿಸ್ ಜಾನ್ಸನ್‌ರವರ ಭಾರತ ಪ್ರವಾಸ ಗುರುವಾರ ಆರಂಭವಾಗಲಿದೆ.
ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಉಭಯ ರಾಷ್ಟ್ರಗಳ ಸಂಬಂಧಗಳು, ವ್ಯಾಪಾರ ವಾಣಿಜ್ಯ ಚಟುವಟಿಕೆಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಇದೇ ವೇಳೆ, ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆ ರಷ್ಯಾವನ್ನು ಮೂಲೆಗುಂಪು ಮಾಡಲು ಪಾಶ್ಚಾತ್ಯ ರಾಷ್ಟ್ರಗಳು ಯತ್ನಿಸುತ್ತಿದ್ದು, ಅದಕ್ಕೆ ಬೆಂಬಲಿಸುವಂತೆ ಭಾರತವನ್ನು ಕೇಳುವ ಸಾಧ್ಯತೆಯಿದೆ.
ಇದನ್ನೂ ಓದಿ:ತೋಕೂರು : 800 ವರ್ಷಗಳ ಇತಿಹಾಸವಿರುವ ದೇವಳದ ಗರ್ಭ ಗುಡಿಯಲ್ಲಿ ಚಿನ್ನದ ಜೋಡಿ ಮಯೂರ ಪತ್ತೆ
ಇಂಧನ ಮತ್ತು ಯುದ್ಧೋಪಕರಣಗಳಿಗೆ ಭಾರತವು ರಷ್ಯಾ ಮೇಲೆ ಅವಲಂಬಿತವಾಗಿದೆ. ಆದರೆ ರಷ್ಯಾ ಬದಲಿಗೆ, ಭಾರತವು ಯು.ಕೆ. ಯುದ್ಧೋಪಕರಣಗಳನ್ನು ಪೂರೈಕೆ ಮಾಡುವ ಸಾಧ್ಯತೆಗಳ ಬಗ್ಗೆಯೂ ಭೇಟಿ ವೇಳೆ ಚರ್ಚಿಸುವ ಸಾಧ್ಯತೆಯಿದೆ.