Advertisement

ಉ.ಕ. ಪ್ರತಿಭೆಗೆ ಬೆಂಗ್ಳೂರಲ್ಲಿಲ್ಲ ಅವಕಾಶ

01:01 PM Sep 19, 2017 | Team Udayavani |

ಧಾರವಾಡ: ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಉತ್ತರ ಕರ್ನಾಟಕ ಪ್ರತಿಭೆಗಳಿಗೆ ಬೆಂಗಳೂರಿನಲ್ಲಿ ಸೂಕ್ತ ಅವಕಾಶ ದೊರಕುತ್ತಿಲ್ಲ ಎಂದು ಹಿರಿಯ ನಟ ಸುರೇಶ ಹೆಬ್ಳಿಕರ್‌ ಹೇಳಿದರು. ಕವಿಸಂನಲ್ಲಿ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಉದ್ಘಾಟಿಸಿ ಮಾತನಾಡಿದರು.

Advertisement

ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಬೇಕು ಎಂದರು. ಸಿನಿಮಾ ಅಂಕಣಕಾರ ಸುರೇಶ ಕುಲಕರ್ಣಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅನೇಕ ಪ್ರತಿಭಾವಂತ ಬರಹಗಾರರು, ಸಾಹಿತಿಗಳು ಸಿನಿಮಾಗಳನ್ನು ಕಟ್ಟಿಕೊಡುವ ಪ್ರತಿಭಾವಂತರಿದ್ದು, ಅವರನ್ನು ಬಳಸಿಕೊಂಡು ಈ ಭಾಗದಲ್ಲಿಯೇ ಶ್ರೇಷ್ಠ ಕನ್ನಡ ಚಿತ್ರಗಳು ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. 

ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಮಾತನಾಡಿದರು. ನವಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ| ಎಂ.ಎ. ಮುಮ್ಮಿಗಟ್ಟಿ ,ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ,

-ಕವಿಸಂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕಲಾವಿದ ಮಧು ದೇಸಾಯಿ, ಸುಭಾಷ ನರೇಂದ್ರ ಇತರರಿದ್ದರು. ಇದೇ ವೇಳೆ 40 ವರ್ಷಗಳಿಂದ ಶ್ರೀನಿವಾಸ ಪದ್ಮಾ ಚಿತ್ರಮಂದಿರದಲ್ಲಿ ಕೆಲಸ ನಿರ್ವಹಿಸುತ್ತಿರುವ ಎನ್‌. ಜೋಷಿ ಅವರನ್ನು ಸನ್ಮಾನಿಸಲಾಯಿತು. ಪ್ರೇಮಾ ನಡುವಿನಮನಿ ನಿರೂಪಿಸಿದರು. ರವಿ ರಸಾಲಕರ ಪ್ರಾಸ್ತಾವಿಕ ಮಾತನಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next