Advertisement

ಉಜ್ವಲ ಯೋಜನೆ: ಜಿಲ್ಲೆಯಲ್ಲಿ ಸಮಗ್ರ ತನಿಖೆ ಆರಂಭ

10:29 AM Aug 12, 2018 | Team Udayavani |

ಬೈಂದೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಉಜ್ವಲವನ್ನು ಬೇರೆ ಟಿನ್‌ ನಂಬರ್‌ ಇದ್ದವರಿಗೆ
ನೀಡಿ ದುರ್ಬಳಕೆ ಮಾಡಿದ ಪ್ರಕರಣದ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸಮಗ್ರ ತನಿಖೆಗೆ ಆದೇಶಿಸಿದೆ.
ಉಡುಪಿ ಜಿಲ್ಲೆಯಲ್ಲಿ ಗ್ಯಾಸ್‌ ವಿತರಕರು ವಿತರಿಸಿದ ಫ‌ಲಾನುಭವಿಗಳ ಕುರಿತು ವಿವರವಾದ ತನಿಖೆ ಆರಂಭಿಸಲಾಗಿದೆ. ಬಿಪಿಎಲ್‌ ಕಾರ್ಡುದಾರರಿಗೆ ಉಚಿತ ಅನಿಲ ಸಂಪರ್ಕ ನೀಡುವ ಉಜ್ವಲ ಯೋಜನೆಯಡಿ ಕೆಲವೆಡೆ ದುರುಪಯೋಗವಾಗಿದೆ ಎಂದು ಉದಯವಾಣಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಕೇಂದ್ರ ಪೆಟ್ರೋಲಿಯಂ ಇಲಾಖೆ ತಮ್ಮ ಅಧಿಕಾರಿಗಳಿಂದ ವರದಿ ಕೇಳಿತ್ತು. ಬ್ರಹ್ಮಾವರ ಹಾಗೂ ಗಂಗೊಳ್ಳಿಯಲ್ಲಿ ನೂರಾರು ಸಂಪರ್ಕ ವನ್ನು ನಿಯಮ ಬಾಹಿರ
ವಾಗಿ ನೀಡಿರುವ ಆರೋಪ ಕೇಳಿಬಂದಿತ್ತು. 

Advertisement

ಗಂಗೊಳ್ಳಿಯಲ್ಲಿ ಇದುವರೆಗೆ ಮುನ್ನೂರಕ್ಕೂ ಅಧಿಕ ಕುಟುಂಬಗಳು ವೈಯಕ್ತಿಕ ಸಂಪರ್ಕದ ಮಾಹಿತಿ ಪಡೆಯಲಾಗಿದೆ. ಒಟ್ಟು 2 ಕೋಟಿಗೂ ಅಧಿಕ ದಂಡ ವಿಧಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲ ಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯಿಸಿದ ಹಿಂದೂಸ್ತಾನ್‌ ಪೆಟ್ರೋಲಿಯಂ ಕಂಪೆನಿಯ ಸಿಆರ್‌ಎಂ ಎನ್‌. ರಮೇಶ ಹಾಗೂ ಭಾರತ್‌ ಪೆಟ್ರೋಲಿಯಂನ ಸಿಆರ್‌ಎಂ ನಾರಾಯಣ ಸ್ವಾಮಿ, ಕೇಂದ್ರ ಪೆಟ್ರೋಲಿಯಂ ಇಲಾಖೆಯ ಮಾರ್ಗಸೂಚಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. 
ಈಗಾಗಲೇ ಬ್ರಹ್ಮಾವರ ಮತ್ತುಗಂಗೊಳ್ಳಿ ಎಜೆನ್ಸಿಯಲ್ಲಿ ಇಂತಹ ಪ್ರಕರಣ ಕಂಡು ಬಂದಿದೆ. ವಿವಿಧ ಏಜೆನ್ಸಿಗಳು ನೀಡಿದ ಪ್ರತಿ ಸಂಪರ್ಕಗಳನ್ನೂ ವಿವರವಾಗಿ ತನಿಖೆ ಮಾಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next