Advertisement

ಮಹಾಕಾಲ ಲೋಕ; ಇಂದು ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

12:12 AM Oct 11, 2022 | Team Udayavani |

ಮಧ್ಯಪ್ರದೇಶದ ಉಜ್ಜೈನ್ ನಲ್ಲಿ ಮಹಾಕಾಲೇಶ್ವರ ದೇಗುಲ ಕಾರಿಡಾರ್‌ ಅಭಿವೃದ್ಧಿ ಯೋಜನೆಯ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಲಿದ್ದಾರೆ. 900 ಮೀ. ಉದ್ದದ ಮಹಾಕಾಲ ಲೋಕ ಕಾರಿಡಾರ್‌ ಅನ್ನು ಅವರು ಲೋಕಾರ್ಪಣೆ ಮಾಡಲಿದ್ದು, ಇದು ಭಾರತದಲ್ಲೇ ಅತ್ಯಂತ ಉದ್ದವಾದ ಕಾರಿಡಾರ್‌ ಎಂಬ ಖ್ಯಾತಿ ಪಡೆಯಲಿದೆ.

Advertisement

ಉದ್ದೇಶವೇನು?
ಪ್ರಾಚೀನ ಮಹಾಕಾಲೇಶ್ವರ ದೇವಾಲಯವು ದೇಶದಲ್ಲಿನ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ವರ್ಷಪೂರ್ತಿ ಇಲ್ಲಿಗೆ ಜನರು ಹರಿದುಬರುತ್ತಲೇ ಇರುತ್ತಾರೆ. ಇದನ್ನು ಆಧ್ಯಾತ್ಮಿಕ ಹಾಗೂ ಪ್ರವಾಸಿತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಮಹಾಕಾಲ ಲೋಕ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಜತೆಗೆ ನಗರದ ಪುರಾತನ ಜಲಾಶಯವಾದ ರುದ್ರಸಾಗರ ಸರೋವರಕ್ಕೂ ಹೊಸ ರೂಪ ನೀಡಲಾಗಿದೆ.

ವೈಶಿಷ್ಟ್ಯವೇನು?
– ಕಾರಿಡಾರ್‌ನ ಆರಂಭದಲ್ಲೇ ನಂದಿದ್ವಾರ ಮತ್ತು ಪಿನಾಕಿ ದ್ವಾರವನ್ನು ನಿರ್ಮಿಸಲಾಗಿದೆ.
– ಒಳಗೆ ಬೃಹದಾಕಾರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.
– ಕಾರಿಡಾರ್‌ ನಿರ್ಮಾಣದಲ್ಲಿ ರಾಜಸ್ಥಾನದ ಬಾನ್ಸಿ ಪಹಾರ್ಪುರದ ಮರಳುಗಲ್ಲು ಬಳಕೆ
ರಾಜಸ್ಥಾನ, ಗುಜರಾತ್‌, ಒಡಿಶಾದ ಶಿಲ್ಪಿಗಳು ಪ್ರತಿಯೊಂದು ಶಿಲೆಯನ್ನೂ ಕೆತ್ತಿ ಅದ್ಭುತ ಸ್ತಂಭಗಳನ್ನು ನಿರ್ಮಿಸಿದ್ದಾರೆ.
– ಕಾರಂಜಿಗಳು, ಶಿವಪುರಾಣದ ಕಥೆಗಳನ್ನು ಹೇಳುವಂಥ 50 ವರ್ಣಚಿತ್ರಗಳು ಕಾರಿಡಾರ್‌ನಲ್ಲಿ ಮಿಂಚಲಿವೆ.
– 108 ಸ್ತಂಭಗಳಿದ್ದು, ಈ ಪೈಕಿ ಕೆಲವು ಸ್ತಂಭಗಳ ಮೇಲ್ಭಾಗದಲ್ಲಿ ತ್ರಿಶೂಲ ಶೈಲಿಯ ವಿನ್ಯಾಸ ಮಾಡಲಾಗಿದೆ. ಜತೆಗೆ ಮುಂಭಾಗದಲ್ಲಿ ಶಿವಮುದ್ರೆಗಳಿವೆ.
– ಉದ್ಯಾನ, ಬಹುಮಹಡಿ ಪಾರ್ಕಿಂಗ್‌ ವ್ಯವಸ್ಥೆ, ಮಳಿಗೆಗಳು, ಸೌರ ವಿದ್ಯುತ್‌ದೀಪಗಳು, ಯಾತ್ರಿಗಳಿಗೆ ಫೆಸಿಲಿಟಿ ಸೆಂಟರ್‌ ಮತ್ತಿತರ ವ್ಯವಸ್ಥೆಗಳಿವೆ.
– ರುದ್ರಸಾಗರ ಸರೋವರದ ಮುಂಭಾಗದಲ್ಲಿ ಸಂಗೀತ ಕಾರಂಜಿಯ ವ್ಯವಸ್ಥೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next