Advertisement

OTಯಲ್ಲಿ ನರ್ಸ್‌ಗೆ ಕಿಸ್‌, ವಿಡಿಯೋ ವೈರಲ್‌, ಸಿವಿಲ್‌ ಸರ್ಜನ್‌ ವಜಾ

05:23 AM Jan 14, 2019 | udayavani editorial |

ಉಜ್ಜೆ„ನ್‌ : ಇಲ್ಲಿನ ಜಿಲ್ಲಾ ಆಸ್ಪತ್ರೆಯ ಸಿವಿಲ್‌ ಸರ್ಜನ್‌ ಆಪರೇಶನ್‌ ಥಿಯೇಟರ್‌ನಲ್ಲಿ  ನರ್ಸ್‌ ಗೆ ಕಿಸ್‌ ನೀಡಿದ ಘಟನೆಯ ವಿಡಿಯೋ ಚಿತ್ರಿಕೆ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದುದನ್ನು ಅನುಸರಿಸಿ ಆತನನ್ನು ಹುದ್ದೆಯಿಂದ ಕಿತ್ತು ಹಾಕಲಾಗಿರುವುದಾಗಿ ವರದಿಯಾಗಿದೆ. 

Advertisement

ಜಿಲ್ಲಾಧಿಕಾರಿ ಶಶಾಂಕ್‌ ಮಿಶ್ರಾ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ಅನಪೇಕ್ಷಿತ ಮತ್ತು ಬೇಜವಾಬ್ದಾರಿಯ ವರ್ತನೆ ತೋರಿರುವ 49ರ ಹರೆಯದ ಸಿವಿಲ್‌ ಸರ್ಜನ್‌ ನನ್ನು ಹುದ್ದೆಯಿಂದ ಕಿತ್ತು ಹಾಕಲಾಗಿದೆ ಎಂದು ತಿಳಿಸಿದರು.  ಆತನಿಂದ ಘಟನೆಯ ಬಗ್ಗೆ  ವಿವರಣೆ ಕೋರುವ Notice ಜಾರಿ ಮಾಡಲಾಗಿದೆ ಎಂದು ಮಿಶ್ರಾ ಹೇಳಿದರು. 

ಘಟನೆಯನ್ನು ಅನುಸರಿಸಿ ಕಳೆದ ಎರಡು ದಿನಗಳಿಂದ ರಜೆಯಲ್ಲಿರುವ ಸಿವಿಲ್‌ ಸರ್ಜನ್‌, ನೊಟೀಸಿಗೆ ಕೊಡುವ ಉತ್ತರದ ಆಧಾರದ ಮೇಲೆ ಆತನ ವಿರುದ್ಧದ ಮುಂದಿನ ಕ್ರಮ ನಿರ್ಧಾರವಾಗಲಿದೆ ಎಂದು ಜಿಲ್ಲಾಧಿಕಾರಿ ಮಿಶ್ರಾ ಹೇಳಿದರು. 

ಈ ನಡುವೆ ಆಸ್ಪತ್ರೆಯ ನರ್ಸಿಂಗ್‌ ಸ್ಟಾಫ್ ಗಳಿಗೆ ಅವರ ವಾಟ್ಸಾಪ್‌ ಗ್ರೂಪ್‌ನಲ್ಲಿ ಘಟನೆಯ ಇನ್ನಷ್ಟು ಆಕ್ಷೇಪಾರ್ಹ ವಿಡಿಯೋ ಚಿತ್ರಿಕೆಗಳು ಬಂದಿವೆ. ಇವುಗಳನ್ನು ಉದ್ದೇಶಪೂರ್ವಕವಾಗಿ ಕಳುಹಿಸಲಾಗಿದೆಯೇ ಅಥವಾ ತಪ್ಪಿನಿಂದ ಕಳುಹಿಸಲಾಗಿದೆಯೇ ಎಂಬುದನ್ನು ತನಿಖೆ ಮಾಡಲಾಗುವುದು ಎಂದು ಡಿಸಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next