Advertisement

 ಉಜಿರೆ: ಸಾಹಿತ್ಯ, ಚಲನಚಿತ್ರ ಅಧ್ಯಯನ ಶಿಬಿರ 

05:06 PM Dec 28, 2017 | |

ಬೆಳ್ತಂಗಡಿ: ಪ್ರಶ್ನೆಗಳು ಹೆಚ್ಚು ಹುಟ್ಟುವುದು ಆರೋಗ್ಯಕರ ಸಮಾಜದ ಲಕ್ಷಣ. ಕಥೆ. ಕಾದಂಬರಿಗಳನ್ನು ದೃಶ್ಯಮಾಧ್ಯಮ ಇನ್ನೊಂದು ತೀರಕ್ಕೆ ತಲುಪಿಸುತ್ತದೆ. ಓದುವ, ನೋಡುವ ದೃಷ್ಟಿಯನ್ನು ಬದಲಾಯಿಸುತ್ತದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.

Advertisement

ಅವರು ಬುಧವಾರ ಉಜಿರೆ ಎಸ್‌.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶ್ರೀ ಧ.ಮಂ. ಕಾಲೇಜು ಉಜಿರೆ, ಕನ್ನಡ ಸಂಘ ಹಾಗೂ ನೀನಾಸಂ ಪ್ರತಿಷ್ಠಾನ ಹೆಗ್ಗೊàಡು ಇವುಗಳ ಜಂಟಿ ಸಹಯೋಗದಲ್ಲಿ 21ನೇ ವರ್ಷದ ಎರಡು ದಿನಗಳ ಸಾಹಿತ್ಯ ಮತ್ತು ಚಲನಚಿತ್ರ ಅಧ್ಯಯನ ಶಿಬಿರ (ಬೊಳುವಾರು ಮಹಮ್ಮದ್‌ ಕುಂಞಿ ಕಥೆಗಳೊಂದಿಗೆ ಅನುಸಂಧಾನ)ದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಪ್ರೊ| ಟಿ. ಪಿ. ಅಶೋಕ ಮಾತನಾಡಿ, ಭಾರತ ಮೃಣ್ಮಯವೋ ಚಿನ್ಮಯವೋ ಎಂದು ಕವಿ ರವೀಂದ್ರನಾಥ ಠಾಗೂರರು ಹುಟ್ಟುಹಾಕಿದ ಚರ್ಚೆ ಇಂದಿಗೂ ಪ್ರಸ್ತುತ ಎಂದರು. ಮುಖ್ಯ ಅತಿಥಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ನಾವೇ ನಿರ್ದೇಶಕರಾಗುವ ಮೂಲಕ ಸಿನೆಮಾಗಳನ್ನು ಕಾದಂಬರಿಯಂತೆ ಓದಬಹುದು, ಕಥೆಗಳನ್ನು ಸಿನೆಮಾದಂತೆ ಕಾಣಬಹುದು. ಅಂತಹ ಅನುಭವಿಸುವಿಕೆ ಅಧ್ಯಯನದ ಮೂಲಕ ಪ್ರಾಪ್ತಿಯಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮಹಮ್ಮದ್‌ ಕುಂಞಿ ವೇದಿಕೆಯಲ್ಲಿದ್ದರು. ಲೇಖಕ ಡಾ| ಮಾಧವ ಚಿಪ್ಪಳಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಕಾಲೇಜಿನ ಪ್ರಾಚಾರ್ಯ ಪ್ರೊ| ಟಿ.ಎನ್‌. ಕೇಶವ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗುವ
ಪ್ರೊ| ಟಿ. ಪಿ. ಅಶೋಕ ಅವರನ್ನು ಸಮ್ಮಾನಿಸಲಾಯಿತು. ಕನ್ನಡ ವಿಭಾಗ ಮುಖ್ಯಸ್ಥ ಡಾ| ಬಿ.ಪಿ. ಸಂಪತ್‌ ಕುಮಾರ್‌ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಡಾ| ಕೆ.ವಿ. ನಾಗರಾಜಪ್ಪ ವಂದಿಸಿದರು.

ಸಿನೆಮಾ ಪ್ರೇಕ್ಷಕರ ಸಂಖ್ಯೆ ಹೆಚ್ಚಲಿ
ಕನ್ನಡದಲ್ಲಿ 4 ಸಾವಿರ ಸಿನೆಮಾಗಳು ಈವರೆಗೆ ಬಂದಿದ್ದರೆ ಈ ಪೈಕಿ 800 ಸಿನಿಮಾಗಳು ಕಥೆ, ಕಾದಂಬರಿ ಆಧಾರಿತವಾಗಿದೆ. 1912ರಲ್ಲಿ ಕಾದಂಬರಿ ಆಧಾರಿತ ಮೊದಲ ಇಂಗ್ಲಿಷ್‌ ಸಿನೆಮಾ ಬಂತು. 1963ರಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಕಾದಂಬರಿ ಆಧಾರಿತ ಸಿನೆಮಾ ಬಂದಿತು. ಸಿನಿಮಾಗಳ ಸಂಖ್ಯೆ ಹೆಚ್ಚುವ ಬದಲು ಸಿನೆಮಾ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಬೇಕಿದೆ.
 -ಪಿ. ಶೇಷಾದ್ರಿ, ಚಲನಚಿತ್ರ ನಿರ್ದೇಶಕ

Advertisement
Advertisement

Udayavani is now on Telegram. Click here to join our channel and stay updated with the latest news.

Next