ಬೆಳ್ತಂಗಡಿ: ಉಜಿರೆಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಪರಿಸರದಲ್ಲಿದ್ದ ತ್ಯಾಜ್ಯ ರಾಶಿಯನ್ನು ವಿಲೇವಾರೀ ಮಾಡುವ ಕಾರ್ಯ ನಡೆದಿದೆ. ಬಸ್ ನಿಲ್ದಾಣದ ಪರಿಸರದಲ್ಲಿ ತ್ಯಾಜ್ಯ ರಾಶಿಯಿರುವ ಕುರಿತು ಉದಯವಾಣಿ ಸುದಿನ ಪಂ. ಆಡಳಿತದ ಗಮನಕ್ಕೆ ತಂದ ತತ್‌ಕ್ಷಣ ಸಂಬಂಧಪಟ್ಟ ಇಲಾಖೆಗೆ ಪಂ. ಸೂಚಿಸಿದ್ದು, ಇಲಾಖೆ ಪಂ.ನ ಸಹಕಾರದೊಂದಿಗೆ ವಿಲೇವಾರೀ ಕಾರ್ಯ ಮಾಡಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಉಪಯೋಗಿಸಿದ ನೀರಿನ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಕಲು ಸೂಕ್ತ ವ್ಯವಸ್ಥೆ ಮಾಡುವ ಭರವಸೆ ನೀಡಿದೆ.
ದಂಡ
ಉಜಿರೆಯಲ್ಲಿರುವ ಹೊಟೇಲ್ ಹಾಗೂ ವಸತಿಗೃಹಗಳ ಹಿಂಬದಿಯಲ್ಲಿ ತ್ಯಾಜ್ಯಗಳನ್ನು ರಾಶಿ ಹಾಕಿರುವ ಕುರಿತು ಗ್ರಾ.ಪಂ.ನಿಂದ ಇನ್ನೆರಡು ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು. ತ್ಯಾಜ್ಯ ರಾಶಿ ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು.
– ಗಾಯತ್ರಿ ಪಿ., ಉಜಿರೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ