Advertisement

ಆಧಾರ್ ನವೀಕರಣಕ್ಕೆ ಎಷ್ಟು ಶುಲ್ಕ ಪಾವತಿಸಬೇಕು..?

08:13 PM Jul 08, 2021 | |

ನವ ದೆಹಲಿ : ದೇಶದ ನಾಗರಿಕ ಗುರುತಿನ ಚೀಟಿ ಎಂದೇ ಕರೆಸಿಕೊಳ್ಳುವ ಆಧಾರ್ ಕಾರ್ಡ್ ನವೀಕರಣಕ್ಕೆ ಒಂದು ಸ್ಥಿರ ಪ್ರಕ್ರಿಯೆ ಇದೆ ಯುಐಡಿಎಐ ಇತ್ತೀಚೆಗೆ ಮಾಹಿತಿ ನೀಡಿದೆ.

Advertisement

ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ, ಹಲವರಲ್ಲಿ ಹಲವು ಗೊಂದಲಗಳಿವೆ. ಆಧಾರ್ ಕಾರ್ಡ್ ನವೀಕರಣ ಮಾಡಲು 5 ರಿಂದ 90 ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಅಂದರೇ, ಸುಮಾರು ಮೂರು ತಿಂಗಳುಗಳ ಕಾಲ ಿದರ ಪ್ರಕ್ರಿಯೆ ಇರಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ :  ‘ಬಜಾಜ್‌ ಅಲಯನ್ಸ್‌ ಲೈಫ್‌ ಗ್ಯಾರಂಟೀಡ್‌ ಪೆನ್ಶನ್‌ ಗೋಲ್‌’ : ಏನಿದು ಬಜಾಜ್ ಹೊಸ ಯೋಜನೆ ..?

ಆಧಾರ್ ಕಾರ್ಡ್ ನವೀಕರಣ ಮಾಡುವ ವಿಧಾನ :

ಮೊದಲಿಗೆ ಇದನ್ನು https://ssup.uidai.gov.in/checkSSUPSstatus/checkupdatestatus ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ 12 ಸಂಖ್ಯೆಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಕ್ಯಾಪ್ಚಾ ಪರಿಶೀಲನೆ ಮಾಡಬೇಕು. ಇದು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ 6 ಅಂಕಿಯ ಒಟಿಪಿಯನ್ನು ಕಳುಹಿಸುತ್ತದೆ. ಒಟಿಪಿಯನ್ನು ನಮೂದಿಸಿದ ನಂತರ, ನಿಮ್ಮ ನವೀಕರಣದ ಪಕ್ರಯೆಗಳ ಬಗ್ಗೆ ನಿಮಗೆ ಮಾಹಿತಿ ದೊರಕುತ್ತದೆ.

Advertisement

ಆಧಾರ್ ಕಾರ್ಡ್‌ ನವೀಕರಣ ಮಾಡುವ ಸಂದರ್ಭದಲ್ಲಿ ನಿಮ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸವನ್ನು ಬದಲಾಯಿಸಲು ನೀವು ಬಯಸಿದರೆ, ನಂತರ ನೀವು 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಮತ್ತು ಸಂಬಂಧಿತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಇದನ್ನೂ ಓದಿ : ವಿಧಾನ ಪರಿಷತ್ ಸಭಾಪತಿಗಳ ಕಾರ್ಯವೈಖರಿ ಇತರರಿಗೆ ಮಾದರಿ:ನಿರ್ಗಮಿತ ರಾಜ್ಯಪಾಲರಿಂದ ಶ್ಲಾಘನೆ

Advertisement

Udayavani is now on Telegram. Click here to join our channel and stay updated with the latest news.

Next