Advertisement

UGC: ದೇಶದಲ್ಲಿವೆ 20 ನಕಲಿ ವಿಶ್ವವಿದ್ಯಾನಿಲಯಗಳು

10:12 PM Aug 02, 2023 | Team Udayavani |

ನವದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಬುಧವಾರ ಕರ್ನಾಟಕದ ಒಂದು ಶಿಕ್ಷಣ ಸಂಸ್ಥೆ ಸೇರಿದಂತೆ ದೇಶದ ಒಟ್ಟು 20 ವಿಶ್ವವಿದ್ಯಾನಿಲಯಗಳನ್ನು ನಕಲಿ ಎಂದು ಘೋಷಿಸಿದೆ. “ಯುಜಿಸಿ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿ ಹಲವು ಶಿಕ್ಷಣ ಸಂಸ್ಥೆಗಳು ಪದವಿಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಯುಜಿಸಿ ಕಠಿಣ ಕ್ರಮ ಕೈಗೊಂಡಿದೆ.

Advertisement

ಉನ್ನತ ಶಿಕ್ಷಣ ಅಥವಾ ಉದ್ಯೋಗದ ಉದ್ದೇಶಕ್ಕಾಗಿ ಇಂತಹ ವಿವಿಗಳು ನೀಡುವ ಪದವಿಗಳು ಮಾನ್ಯತೆ ಹೊಂದಿರುವುದಿಲ್ಲ. ಈ ವಿಶ್ವವಿದ್ಯಾನಿಲಯಗಳು ಯಾವುದೇ ಪದವಿಯನ್ನು ನೀಡಲು ಅಧಿಕಾರ ಹೊಂದಿಲ್ಲ’ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್‌ ಜೋಶಿ ಹೇಳಿದ್ದಾರೆ. ಕರ್ನಾಟಕದ ಬಡಗಾಂವಿ ಸರ್ಕಾರ್‌ ವರ್ಲ್ಡ್ ಓಪನ್‌ ಯೂನಿವರ್ಸಿಟಿ ಎಜುಕೇಶನ್‌ ಸೊಸೈಟಿ, ದೆಹಲಿಯ ವಿಶ್ವಕರ್ಮ ಓಪನ್‌ ಯೂನಿವರ್ಸಿಟಿ, ಉತ್ತರ ಪ್ರದೇಶದ ಗಾಂಧಿ ಹಿಂದಿ ವಿದ್ಯಾಪೀಠ ಸೇರಿದಂತೆ ದೇಶದ 20 ವಿಶ್ವವಿದ್ಯಾನಿಲಯಗಳನ್ನು ನಕಲಿ ಎಂದು ಯುಜಿಸಿ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next