Advertisement

29ನ್ನು “ಸರ್ಜಿಕಲ್‌ ದಾಳಿ ದಿನ’ವನ್ನಾಗಿ ಆಚರಿಸಿ

06:00 AM Sep 21, 2018 | |

ಹೊಸದಿಲ್ಲಿ: ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿರುವ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಇದೇ ತಿಂಗಳ 29ನ್ನು, “ಸರ್ಜಿಕಲ್‌ ಸ್ಟ್ರೈಕ್‌ ದಿನ’ವನ್ನಾಗಿ ಆಚರಿಸುವಂತೆ ಸೂಚಿಸಿದೆ. 

Advertisement

ಭಾರತೀಯ ಸೇನೆಯು 2016ರಲ್ಲಿ ಕೈಗೊಂಡಿದ್ದ ಸರ್ಜಿಕಲ್‌ ದಾಳಿಯ 2ನೇ ವರ್ಷಾಚರಣೆಯ ಅಂಗವಾಗಿ, ನಿವೃತ್ತ ಸೈನಿಕರು ಹಾಗೂ ವಿದ್ಯಾರ್ಥಿಗಳ ನಡುವೆ ಸಂವಾದ ಕಾರ್ಯಕ್ರಮ, ವಿಶೇಷ ಪರೇಡ್‌ ನಡೆಸಬೇಕು ಹಾಗೂ ಸೈನಿಕರಿಗೆ ಶುಭಾಶಯದ ಗ್ರೀಟಿಂಗ್ಸ್‌ ಕಳಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು ಎಂದಿದೆ. ಅಲ್ಲದೆ, ಸಂಭ್ರಮಾಚರಣೆ ನಿಮಿತ್ತ ಪ್ರತಿ ರಾಜ್ಯಗಳಲ್ಲಿ ಆಯೋಜಿಸಲಾಗುವ ವಿಶೇಷ ಸೇನಾ ವಸ್ತು ಪ್ರದರ್ಶನಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವ್ಯವಸ್ಥೆ ಕೈಗೊಳ್ಳಬೇಕು ಎಂದೂ ಹೇಳಿದೆ. 2016ರ ಸೆ. 29ರಂದು ಭಾರತೀಯ ಸೈನಿಕರು, ಪಾಕ್‌ ನೆಲೆಯೊಳಗೆ ನುಗ್ಗಿ ಉಗ್ರರ ಅಡಗುದಾಣಗಳನ್ನು  ಧ್ವಂಸಗೊಳಿಸಿದ್ದನ್ನು ಸರ್ಜಿಕಲ್‌ ಸ್ಟೈಕ್‌ ಎಂದು ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next