Advertisement

UGC; 4 ವರ್ಷದ ಪದವಿಗೂ ಪಿಎಚ್‌.ಡಿ ಪ್ರವೇಶಕ್ಕೆ ಅವಕಾಶ

12:39 AM Apr 22, 2024 | Team Udayavani |

ಹೊಸದಿಲ್ಲಿ: ಕನಿಷ್ಠ ಶೇ.75ರಷ್ಟು ಅಂಕಗಳೊಂದಿಗೆ 4 ವರ್ಷಗಳ ಪದವಿ ಪೂರೈಸಿರುವ ವಿದ್ಯಾರ್ಥಿಗಳು ನೇರ ವಾಗಿ ಎನ್‌ಇಟಿ(ನೆಟ್‌) ಪರೀಕ್ಷೆ ಬರೆದು, ಪಿಎಚ್‌.ಡಿ ಪ್ರವೇಶ ಪಡೆಯಬಹುದು ಎಂದು ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ. ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌(ಜೆಆರ್‌ಎಫ್) ಜತೆಗೆ ಅಥವಾ ಇಲ್ಲದೆಯೇ ಪಿಎಚ್‌.ಡಿ ಪಡೆಯಲು ಅಭ್ಯರ್ಥಿಗಳು 4 ವರ್ಷ ಪದವಿಯಲ್ಲಿ ಕನಿಷ್ಠ ಶೇ.75ರಷ್ಟು ಅಂಕಗಳು ಅಥವಾ ಸಮಾನ ಗ್ರೇಡ್‌ ಹೊಂದುವುದು ಅಗತ್ಯವಿದೆ.

Advertisement

ಎಸ್‌ಸಿ, ಎಸ್‌ಟಿ, ಒಬಿಸಿ(ಕೆನೆ ಪದರ ಕೆಳಗಿನವರು), ಅಂಗವಿಕಲರು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಅಂಕಗಳಲ್ಲಿ ಶೇ.5ರಷ್ಟು ವಿನಾಯಿತಿ ದೊರೆಯಲಿದೆ. ಇದುವರೆಗೂ ನೆಟ್‌ ಬರೆಯಲು ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕ ಪಡೆಯುವುದು ಅಗತ್ಯವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next