Advertisement
ಇದು ಟಿ20 ವಿಶ್ವಕಪ್ ಇತಿಹಾಸದ ಎರಡನೇ ಗರಿಷ್ಠ ರನ್ ಅಂತರದ ಗೆಲುವು ಆಗಿದೆ. 2007ರ ಉದ್ಘಾಟನಾ ಕೂಟದಲ್ಲಿ ಶ್ರೀಲಂಕಾ ತಂಡವು ಕೀನ್ಯ ವಿರುದ್ಧ 172 ರನ್ನುಗಳಿಂದ ಗೆದ್ದಿರುವುದು ದಾಖಲೆಯಾಗಿದೆ.ಈ ಗೆಲುವಿನಿಂದ ವೆಸ್ಟ್‌ಇಂಡೀಸ್ “ಸಿ’ ಬಣದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಗೆದ್ದು ನಾಲ್ಕಂಕ ಸಂಪಾದಿಸಿ ದ್ವಿತೀಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಅಘಾ^ನಿಸ್ಥಾನ ಕೂಡ ನಾಲ್ಕಂಕ ಹೊಂದಿದ್ದು ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಅಗ್ರಸ್ಥಾನದಲ್ಲಿದೆ. ಮೂರು ಪಂದ್ಯ ಆಡಿರುವ ಉಗಾಂಡ ಎರಡಂಕ ಪಡೆದು ದ್ವಿತೀಯ ಸ್ಥಾನದಲ್ಲಿದೆ. ವೆಸ್ಟ್‌ಇಂಡೀಸ್ ಮುಂದಿನ ಪಂದ್ಯದಲ್ಲಿ ಜೂ. 13ರಂದು ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.
ಅಖೀಲ್ ಹೊಸೈನ್ ಅವರ ಜೀವನಶ್ರೇಷ್ಠ ನಿರ್ವಹಣೆಯಿಂದಾಗಿ ಉಗಾಂಡ ಕೇವಲ 12 ಓವರ್ ಆಡಿ 39 ರನ್ನಿಗೆ ಸರ್ವಪತನ ಕಂಡಿತು. ಇದು ಟಿ20 ವಿಶ್ವಕಪ್‌ನ ಜಂಟಿ ನಿಕೃಷ್ಟ ಮೊತ್ತವಾಗಿದೆ. ಈ ಮೊದಲು 2014ರ ಮಾರ್ಚ್ 24ರಂದು ಚಟ್ಟೋಗ್ರಾಮ್‌ನಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು ಶ್ರೀಲಂಕಾ ವಿರುದ್ಧ 39 ರನ್ನಿಗೆ ಆಲೌಟಾಗಿತ್ತು.
ಈ ಮೊದಲು ಜಾನ್ಸನ್ ಚಾರ್ಲ್ಸ್ ಮತ್ತು ಆ್ಯಂಡ್ರೆ ರಸೆಲ್ ಅವರ ಬಿರುಸಿನ ಆಟದಿಂದಾಗಿ ವೆಸ್ಟ್‌ಇಂಡೀಸ್ ತಂಡವು 5 ವಿಕೆಟಿಗೆ 173 ರನ್ನುಗಳ ಸವಾಲೆಸೆಯುವ ಮೊತ್ತ ಪೇರಿಸಿತ್ತು. ಚಾರ್ಲ್ಸ್ 42 ಎಸೆತಗಳಿಂದ 44 ರನ್ ಹೊಡೆದರು. ಕೊನೆ ಹಂತದಲ್ಲಿ ಭರ್ಜರಿಯಾಗಿ ಆಡಿದ ರಸೆಲ್ 17 ಎಸೆತಗಳಿಂದ ಆರು ಬೌಂಡರಿ ಬಾರಿಸಿ 30 ರನ್ ಗಳಿಸಿ ಅಜೇಯರಾಗಿ ಉಳಿದರು. ವೆಸ್ಟ್‌ಇಂಡೀಸ್ ದಾಳಿಯನ್ನು ಎದುರಿಸಲು ವಿಫಲವಾದ ಉಗಾಂಡ ತಂಡವು ಆರಂಭದಿಂದಲೇ ಕುಸಿಯತೊಡಗಿತು. ಜುಮ ಮಿಯಾಗಿ ಅವ ರನ್ನು ಹೊರತುಪಡಿಸಿದರೆ ತಂಡದ ಇನ್ನುಳಿದ ಆಟಗಾರರೆಲ್ಲ ಎರಡಂಕೆಯ ಮೊತ್ತ ತಲುಪಲು ವಿಫಲರಾದರು. ಮಿಯಾಗಿ 13 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರೇ ತಂಡದ ಗರಿಷ್ಠ ಸ್ಕೋರರ್ ಕೂಡ ಆಗಿದ್ದಾರೆ.
Related Articles
ಅಖೀಲ್ ಹೊಸೈನ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಉಗಾಂಡ ತತ್ತರಿಸಿ ಹೋಯಿತು. ಅಖೀಲ್ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 11 ರನ್ ನೀಡಿ 5 ವಿಕೆಟ್ ಕಿತ್ತರು. ಇದು ಟಿ20 ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ಬೌಲರೊಬ್ಬರ ಶ್ರೇಷ್ಠ ನಿರ್ವಹಣೆಯಾಗಿದ್ದು ಸಾಮ್ಯುಯೆಲ್ ಬದ್ರಿ ಅವರ ಸಾಧನೆಯನ್ನು ಹಿಂದಿಕ್ಕಿದರು. ಅವರು 2014ರಲ್ಲಿ ಮಿರ್ಪುರ್‌ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 15 ರನ್ನಿಗೆ 4 ವಿಕೆಟ್ ಕಿತ್ತಿದ್ದರು.
Advertisement
ಟಿ20 ಪಂದ್ಯದಲ್ಲಿ ಅಖೀಲ್ ಅವರ ಸಾಧನೆ ಎರಡನೇ ಶ್ರೇಷ್ಠ ಬೌಲಿಂಗ್ ನಿರ್ವಹಣೆಯಾಗಿದೆ. 2022ರಲ್ಲಿ ಭಾರತ ವಿರುದ್ಧ ಒಬೆದ್ ಮೆಕ್‌ಕಾಯ್ 17 ರನ್ನಿಗೆ 6 ವಿಕೆಟ್ ಕಿತ್ತಿರುವುದು ಸರ್ವಶ್ರೇಷ್ಠ ನಿರ್ವಹಣೆಯಾಗಿದೆ.
ಸಂಕ್ಷಿಪ್ತ ಸ್ಕೋರುವೆಸ್ಟ್ಇಂಡೀಸ್ 5 ವಿಕೆಟಿಗೆ 173 (ಜೊನಾಥನ್ ಚಾರ್ಲ್ಸ್ 44, ಆ್ಯಂಡ್ರೆ ರಸೆಲ್ 30 ಔಟಾಗದೆ, ಬ್ರ್ಯಾನ್ ಮಸಾಬ 31ಕ್ಕೆ 2); ಉಗಾಂಡ 12 ಓವರ್‌ಗಳಲ್ಲಿ 39 (ಜುಮ ಮಿಯಾಗಿ 13, ಅಖೀಲ್ ಹೊಸೈನ್ 11ಕ್ಕೆ 5ಅಲ್ಜಾರಿ ಜೊಸೆಫ್ 6ಕ್ಕೆ 2). ಪಂದ್ಯಶ್ರೇಷ್ಠ: ಅಖೀಲ್ ಹೊಸೈನ್