Advertisement
ವರಕವಿ ಬೇಂದ್ರೆಯವರ ಈ ಪದ್ಯವನ್ನು ಗುನುಗುತ್ತಾ ಯುಗಾದಿ ಹಬ್ಬದ ಜೊತೆಗೆ ಬರುವಸಂಭ್ರಮವನ್ನು ನೆನಪಿಸಿಕೊಳ್ಳುತ್ತಾ ಗೆಳತಿಶಮ್ಮಿಯ ಮನೆಗೆ ಹೋದಾಗ, ಅವಳೂಮಗಳನ್ನು ಕೂರಿಸಿಕೊಂಡು- ಯುಗಯುಗಾದಿಕಳೆದರೂ…ಗೀತೆಯನ್ನೇ ಹಾಡುತ್ತಿದ್ದುದನ್ನು ಕಂಡು ಅಚ್ಚರಿಯಾಯ್ತು.
Related Articles
Advertisement
ಈ ಸಂದರ್ಭದಲ್ಲಿ ಮೂಕ ಪ್ರೇಕ್ಷಕಿಯಾಗಿ ಕೂರುವುದು ಸರಿಯಲ್ಲವೆನಿಸಿ ನಾನೂ ಹೇಳಿದೆ-“ನೋಡಮ್ಮ, ಹಬ್ಬದ ದಿನ ಮನೆಯಲ್ಲಿ ಎಲ್ಲರಜೊತೆಗೆ ಇರಬೇಕು. ಯುಗಾದಿಯೆಂದರೆಕೇವಲ ಒಬ್ಬಟ್ಟಿನ ಊಟದಹಬ್ಬ ಮಾತ್ರವಲ್ಲ. ಅದು ವಸಂತಾಗಮನವನ್ನು ಸಾರಿ ಹೇಳುವ ಹಬ್ಬ. ಆ ದಿನದ ಪ್ರತಿ ಕ್ಷಣವೂ ಸ್ಮರಣೀಯ ವಾಗಿರುತ್ತದೆ. ಅದನ್ನು ಕುಟುಂಬದ ಜನರೊಂದಿಗೆ ಅನುಭವಿಸಿ ಎಂಜಾಯ್ ಮಾಡಬೇಕು.ನಾವು ಚಿಕ್ಕವರಿದ್ದಾಗ, ದೊಡ್ಡ ಹಂಡೆಯಲ್ಲಿ ಎಲ್ಲರಿಗೂನೀರು ಕಾಯಿಸುವ ಕೆಲಸವನ್ನು, ಹೂವು ಕಟ್ಟುವುದನ್ನು, ಮನೆಸಾರಿಸುವ ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದೆವು.ಅಮ್ಮನಿಂದ ಎಣ್ಣೆ ಹಚ್ಚಿಸಿಕೊಳ್ಳಲು ಕ್ಯೂನಿಲ್ಲುತ್ತಿದ್ದೆವು. ಅಮ್ಮ ಒಬ್ಬಟ್ಟು ಮಾಡುವುದನ್ನು ಬೆರಗಿನಿಂದನೋಡುತ್ತಿದ್ದೆವು. ಪೂಜೆಮುಗಿದ ನಂತರ ಊಟಕ್ಕೂಮೊದಲು ಎಲ್ಲರೂ ಕಡ್ಡಾಯವಾಗಿಬೇವು- ಬೆಲ್ಲದ ಮಿಶ್ರಣವನ್ನು ತಿನ್ನಲೇಬೇಕಿತ್ತು. ನಾವು ತಪ್ಪಿಸಿಕೊಳ್ಳಲು ನೋಡಿದರೂ ಹಿರಿಯರು ಬಿಡುತ್ತಿರಲಿಲ್ಲ. ಮುಖ ಕಿವಿಚಿಕೊಂಡೇ ಅದನ್ನು ತಿಂದುಮುಗಿಸುತ್ತಿದ್ದೆವು.
ಆದರೆ, ಈಗ ನಿಮ್ಮ ಪೀಳಿಗೆಯ ಮಕ್ಕಳಿಗೆಹಬ್ಬದ ಹಿನ್ನೆಲೆಯೂ ಗೊತ್ತಿಲ್ಲ, ಅದನ್ನು ತಿಳಿಯುವ ಆಸಕ್ತಿಯೂ ಇಲ್ಲ. ಮೊಬೈಲ್ ಹಿಡಿದುಕೊಂಡು, ಗೇಮ್ಸ್ ಆಡಿಕೊಂಡು, ವಾಟ್ಸ್‌ಆ್ಯಪ್ ನಲ್ಲಿ ಚಾಟ್ ಮಾಡಿಕೊಂಡು,ಸಿನಿಮಾ ನೋಡಿಕೊಂಡು ಇರುವುದೇ ಬದುಕು ಅಂತ ತಿಳಿದಿದ್ದೀರಿ. ಹೀಗೆ ಆಗಬಾರದು. ಹಬ್ಬಗಳಿಗೆ ಇರುವ ಹಿನ್ನೆಲೆ, ಅದರೊಂದಿಗೆ ಸೇರಿಕೊಂಡಿರುವ ಸತ್ ಸಂಪ್ರದಾಯದ
ಆಚರಣೆಗಳನ್ನು ಅರಿಯಬೇಕು. ಹಬ್ಬವನ್ನು ಮನೆಯವರ ಜೊತೆ ಆಚರಿಸಿದಾಗಲೇ ಅದರ ಮಹತ್ವ ಹೆಚ್ಚುತ್ತದೆ. ನೀನೀಗ ಹೋಗಿ ಫ್ರೆಶ್ ಆಗಿ ಬಾ. ಅಮ್ಮನ ಜೊತೆ ಹೋಗಿ ಹಬ್ಬಕ್ಕೆ ಹೊಸ ಬಟ್ಟೆ ತರೋಣ…” ಎಂದೆ.
ಕೆಲವೇ ನಿಮಿಷಗಳ ಹಿಂದೆ, ಯುಗಾದಿ ಹಬ್ಬದ ದಿನ ನಾವು ಫ್ರೆಂಡ್ಸ್ ಎಲ್ಲಾ ಸಿನಿಮಾಕ್ಕೆ ಹೋಗುವುದೇ ಸೈ ಅಂದಿದ್ದಶಮ್ಮಿಯ ಮಗಳು ಈಗ ಧ್ವನಿ ಬದಲಿಸಿ- “ಅಮ್ಮಾ…ಶಾಪಿಂಗ್ ಹೋಗೋಣ, ನಾನು ಬೇಗ ರೆಡಿ ಆಗ್ತೀನೆ’ಅನ್ನುತ್ತಾ ರೂಮ್ ಸೇರಿಕೊಂಡಳು. ಶಮ್ಮಿಯ ಕಣ್ಣಲ್ಲಿ ಆನಂದಬಾಷ್ಪವಿತು
– ಹೀರಾ ರಮಾನಂದ್