Advertisement

Organaisation: ಅಮೆರಿಕದಲ್ಲಿ ಆರೆಸ್ಸೆಸ್‌ ಸಂಘಟನೆಗೆ ಉತ್ತಮ ಸ್ಪಂದನೆ: ವಿಪುಲ್‌ ರೈ

02:17 AM Oct 23, 2024 | Team Udayavani |

ಪುತ್ತೂರು: ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ವು ಅಮೆರಿಕದಲ್ಲಿ ಹಿಂದೂ ಸ್ವಯಂಸೇವಕ ಸಂಘ(ಎಚ್‌ಎಸ್‌ಎಸ್‌)ದ ಹೆಸರಿನಲ್ಲಿ ಪ್ರತಿ ರವಿವಾರ ಸಂಘದ ಶಾಖೆ ನಡೆಸುತ್ತಿದೆ. ಅಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಅಮೆರಿಕದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಸಂಘಟನ ಸದಸ್ಯನಾಗಿರುವ ವಿಪುಲ್‌ ಎಸ್‌. ರೈ ಕಡಮಜಲು ತಿಳಿಸಿದ್ದಾರೆ.

Advertisement

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಹಿಂದುತ್ವದ ವಿಚಾರದಲ್ಲಿ ಕನ್ನಡ ಸಂಘ, ತುಳು ಸಂಘಟನೆ, ಯಕ್ಷಗಾನಕ್ಕೆ ಸಹಕಾರ, ದಕ್ಷಿಣ ಕನ್ನಡ ಒಕ್ಕೂಟ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ಯೋತಕವಾಗಿ ಹಿಂದೂ ಸ್ವಯಂ ಸೇವಕ ಸಂಘದಲ್ಲಿ ಸಂಘಟನ ಸದಸ್ಯನಾಗಿ ದುಡಿಯುತ್ತಿದ್ದೇನೆ ಎಂದರು.

ಮುಂದಿನ ಪೀಳಿಗೆಗೆ ಅಮೆರಿಕದಲ್ಲಿ ನೆಲೆಸಿರುವ ಮಕ್ಕಳಿಗಾಗಿ ಕನ್ನಡ ಶಾಲೆ, ಭಾರತದ ಸಂಸ್ಕೃತಿ ಮತ್ತು ಧರ್ಮದ ವಿಚಾರಧಾರೆಗಳನ್ನು ಕಲಿಸುವ ಚಿನ್ಮಯ ಮಿಷನ್‌ನ ಬಾಲವಿಹಾರ ಶಾಲೆಗಳನ್ನು ಮುನ್ನಡೆಸಲಾಗುತ್ತದೆ ಎಂದರು. ಕ್ಯಾಲಿಫೋರ್ನಿಯ ರಾಜ್ಯದ ಲಾಸ್‌ಏಂಜಲೀಸ್‌ ಜಿಲ್ಲೆಯಲ್ಲಿ 8 ಶಾಖೆಗಳಿವೆ. ಪ್ರತಿಯೊಂದು ಶಾಖೆಗೂ ಸುಮಾರು 50ರಿಂದ 60 ಮಂದಿ ಪೋಷಕರು ಹಾಗೂ ಅವರ ಜತೆ ಮಕ್ಕಳು ಬರುತ್ತಾರೆ.

ಮೂರು ವಾರಗಳ ಹಿಂದೆ ನ್ಯಾಂಟಕ್ಲಾರಿಟಾ ಎಂಬಲ್ಲಿ ಹೊಸ ಶಾಖೆ ಆರಂಭಗೊಂಡಿದೆ. ಸುಮಾರು ಒಂದೂವರೆ ಸಾವಿರ ದೇವಸ್ಥಾನಗಳ ಮೂಲಕ ಹಿಂದೂ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು. ಪ್ರಮುಖರಾದ ಕಡಮಜಲು ಸುಭಾಷ್‌ ರೈ, ಶಶಿಕುಮಾರ್‌ ರೈ ಬಾಲೊಟ್ಟು, ದಯಾನಂದ ಶೆಟ್ಟಿ ಉಜಿರುಮಾರು, ಶಿವಕುಮಾರ್‌ ಕಲ್ಲಿಮಾರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next