Advertisement

Waqf property: ಹಿಂದೂ- ಮುಸ್ಲಿಂ ತಳುಕು ಹಾಕುವುದು ಸಲ್ಲದು

10:19 AM Nov 02, 2024 | Team Udayavani |

ಉಡುಪಿ: ನಮ್ಮ ಸರಕಾರ ಯಾರನ್ನೂ ಒಕ್ಕಲೆಬ್ಬಿಸದು ಮತ್ತು ಯಾರಿಗೂ ಅನ್ಯಾಯ ಮಾಡದು. ಭೂಮಿ ಒತ್ತುವರಿ ಆಗಿರುವುದಕ್ಕೆ ಕಂದಾಯ ಸಚಿವಾಲಯ ನೋಟಿಸ್‌ ಕೊಟ್ಟಿದೆ. ಇದನ್ನೇ ಕೇಂದ್ರವಾಗಿಸಿಕೊಂಡು ವಕ್ಫ್ ಸೊತ್ತು ರಾಷ್ಟ್ರೀಕರಣ ಮಾಡಬೇಕು ಅಥವಾ ಹಿಂದೂ, ಮುಸ್ಲಿಂ ವಿಚಾರ ತಳುಕು ಹಾಕುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಹೇಳಿದರು.

Advertisement

ಉಡುಪಿಯಲ್ಲಿ ಮಾತನಾಡಿದ ಅವರು, ವಕ್ಫ್ ಸೊತ್ತುಗಳನ್ನು ರಾಷ್ಟ್ರೀಕರಣಗೊಳಿಸಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಗೆ ಕಿಡಿಕಾರಿದ ಅವರು, ಯತ್ನಾಳ್‌ ಬಗ್ಗೆ ಮಾತನಾಡಲು ಏನೂ ಇಲ್ಲ. ಅವರಿಗೆ ಹಿಂದೂ – ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ . ಅದನ್ನು ಹೇಳಿಕೊಂಡೇ ಅವರು ಗೆದ್ದುಕೊಂಡು ಬಂದವರು. ಮಹಾತ್ಮ ಗಾಂಧಿ, ಡಾ| ಅಂಬೇಡ್ಕರ್‌ ಹೇಳಿ ಕೊಟ್ಟಂತೆ ಬದುಕುವವರು ನಾವು ಎಂದರು.

ಬಿಯರ್‌ ದರ ಹೆಚ್ಚಿಸಿ ಮಹಿಳೆ ಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ ಎಂಬ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮಹಿಳೆಯರಿಗೆ ಮೊದಲು ಗೌರವ ಕೊಡಬೇಕು. ಆಮೇಲೆ ಬಿಯರ್‌ ಬಗ್ಗೆ ಮಾತನಾಡಿ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜಿಡಿಪಿ ಜಾಸ್ತಿಯಾಗಿದೆ. ಹಿರಿಯರಾಗಿರುವ ವಿಶ್ವನಾಥ್‌ ಮೊಸರಿನಲ್ಲಿ ಕಲ್ಲು ಹುಡುಕು ವುದನ್ನು ಬಿಡಲಿ. ಮಹಿಳೆಯರಿಗೆ ಉತ್ತೇಜನ ಕೊಡಲು ಯೋಜನೆ ಮಾಡಿದ್ದೇವೆ. ಈಗ ರಾಜ್ಯದಲ್ಲಿ ಮಹಿಳಾ ಸಬಲೀಕರಣ ನಡೆಯುತ್ತಿದೆ. ಬಸವಣ್ಣನ ನಾಡಿನಲ್ಲಿ ಮಹಿಳೆಯರನ್ನು ಸರಿಸಮನಾಗಿ ಕಾಣಬೇಕು ಎಂದರು.

ಶೀಘ್ರ ಜನತಾ ದರ್ಶನ
ಜಿಲ್ಲೆಯಲ್ಲಿ ಶೀಘ್ರವೇ ಜನತಾ ದರ್ಶನ ಮಾಡಲಿದ್ದೇವೆ. ಹಾಗೆಯೇ ನವೆಂಬರ್‌ ತಿಂಗಳಲ್ಲಿ ಕೆಡಿಪಿ ಸಭೆ ನಡೆಸಲಿದ್ದೇವೆ. ಜಿಲ್ಲೆಯಲ್ಲಿ ಧರ್ಮ ದಂಗಲ್‌ಗೆ ಅವಕಾಶ ನೀಡುವುದಿಲ್ಲ. ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ ಎಂದು ಸಚಿವರು ತಿಳಿಸಿದರು.

ಪ್ರಧಾನಮಂತ್ರಿಗಳು ಯಾವ ಹಿನ್ನೆಲೆಯಲ್ಲಿ ‘ನಗರ ನಕ್ಸಲರು’ ಎಂಬ ಪದ ಬಳಕೆ ಮಾಡಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಪಕ್ಷಾತೀತವಾಗಿ ನರೇಂದ್ರ ಮೋದಿಯವರು ನಮ್ಮ ಪ್ರಧಾನಿ. ಪ್ರಧಾನಿ ಮೇಲೆ ನಮಗೆ ಗೌರವ ಇದೆ. ಕಾಂಗ್ರೆಸ್ಸನ್ನು ಗುರಿಯಾಗಿಸಿ ಅವರು ನಗರ ನಕಲ್ಸರು ಎಂದಿದ್ದರೆ ಅದು ಅಸಾಂವಿಧಾನಿಕ ಮಾತಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next