Advertisement

UG NEET/CET: ಇಂದಿನಿಂದ ಪ್ರವೇಶ

11:29 PM Aug 17, 2023 | Team Udayavani |

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್‌ ಸಹಿತ ಇತರ ವೃತ್ತಿಪರ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆ ಮುಗಿದಿದ್ದು, ಶುಲ್ಕ ಪಾವತಿಸಿ ಪ್ರವೇಶ ಪಡೆಯುವ ಪ್ರಕ್ರಿಯೆ ಶುಕ್ರವಾರ (ಆ. 18) ಆರಂಭವಾಗಲಿದೆ. ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಆ.20ರ ಮಧ್ಯರಾತ್ರಿ 11.59ರ ವರೆಗೆ ಅವಕಾಶ ಇರುತ್ತದೆ. ಆ.19ರಿಂದ 22ರ ವರೆಗೆ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ತಿಳಿಸಿದ್ಧಾರೆ.

Advertisement

ಕೇವಲ ಆಯ್ಕೆ-1 ಅನ್ನು ನಮೂದಿಸಿರುವವರು ಶುಲ್ಕ ಪಾವತಿ ಮಾಡಿ, ಬಳಿಕ ಪ್ರವೇಶಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಒಂದು ವೇಳೆ ಸಿಕ್ಕಿರುವ ಕಾಲೇಜು ಇಷ್ಟ ವಿಲ್ಲದೆ, ಉತ್ತಮ ಕಾಲೇಜು ಬೇಕೆನ್ನುವವರು ಆಯ್ಕೆ-2 ನಮೂದಿಸಿ, ಶುಲ್ಕ ಪಾವತಿ ಮಾಡಬೇಕು. ಇಂಥವರು 2ನೇ ಸುತ್ತಿನ ಸೀಟು ಹಂಚಿಕೆ ಫ‌ಲಿತಾಂಶ ನೋಡಿ ಕೊಂಡು ಇಚ್ಛೆ ಪ್ರಕಾರ ಪ್ರವೇಶ ಪಡೆಯಬಹುದಾಗಿರುತ್ತದೆ. ಆಯ್ಕೆ- 1 ಅನ್ನು ನಮೂದಿಸಿದವರು ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಆ.23 ಕೊನೇ ದಿನ.

Advertisement

Udayavani is now on Telegram. Click here to join our channel and stay updated with the latest news.

Next