Advertisement

Udupi: ಜುವೆಲರಿಗೆ ನಕಲಿ ಚಿನ್ನ ನೀಡಿ ವಂಚಿಸಿದ ಮಹಿಳೆಯರು

12:01 AM Feb 21, 2024 | Team Udayavani |

ಉಡುಪಿ: ಇಲ್ಲಿಯ ಜುವೆಲರಿ ಶಾಪೊಂದಕ್ಕೆ ಬಂದ ಮಹಿಳೆಯರು ಅಂಗಡಿಯವರ ಗಮನವನ್ನು ಬೇರೆಡೆ ಸೆಳೆದು ನಕಲಿ ಚಿನ್ನಾಭರಣಗಳನ್ನು ನೀಡಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

Advertisement

ಕನಕದಾಸ ರಸ್ತೆಯಲ್ಲಿರುವ ಅಂಗಡಿಗೆ ಫೆ.18ರಂದು ರಾತ್ರಿ 7.30ರ ಸುಮಾರಿಗೆ 35ರಿಂದ 45 ವರ್ಷ ಪ್ರಾಯದ ಮೂವರು ಬುರ್ಖಾಧಾರಿ ಮಹಿಳೆ ಯರು ಬಂದು 15.800 ಗ್ರಾಂ ತೂಕದ ಒಂದು ಚಿನ್ನದ ಚೈನ್‌ ಮತ್ತು 10.150 ಗ್ರಾಂ ತೂಕದ ಬ್ರೇಸ್‌ಲೆಟ್‌ ಖರೀದಿಸಿದ್ದರು. ಇದಕ್ಕೆ ಬದಲಾಗಿ ಆರೋಪಿಗಳು ತಮ್ಮಲ್ಲಿದ್ದ ಹಳೆಯ 31.490 ಗ್ರಾಂ ತೂಕದ ಒಂದು ನೆಕ್ಲೇಸ್‌ ಮತ್ತು 10.940 ಗ್ರಾಂ ತೂಕದ ಜುಮುಕಿ ನೀಡಿದ್ದರು. ಅಂಗಡಿಯವರಿಂದ 48,771 ರೂ. ಉಳಿಕೆ ಹಣದ ಪೈಕಿ 19,000 ರೂ. ಪಡೆದುಕೊಂಡು 8.30ರ ಸುಮಾರಿಗೆ ನಿರ್ಗಮಿಸಿದ್ದರು.

ಆರೋಪಿಗಳು ವ್ಯವಹಾರದ ಸಮಯದಲ್ಲಿ ಚೌಕಾಸಿ ಮಾಡುವ ವೇಳೆ ಅಂಗಡಿಯವರ ಗಮನವನ್ನು ಬೇರೆಡೆಗೆ ಸೆಳೆದು ನಕಲಿ ಚಿನ್ನದ ಆಭರಣಗಳನ್ನು ನೀಡಿ 1,98,923 ರೂ. ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next