Advertisement

ಉಡುಪಿ: ಸಂಭ್ರಮದ ವಿಟ್ಲಪಿಂಡಿ ಉತ್ಸವ ಸಂಪನ್ನ

08:40 AM Sep 15, 2017 | Harsha Rao |

ಉಡುಪಿ: ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಶ್ರೀಕೃಷ್ಣ ಮಠದಲ್ಲಿ ಗುರುವಾರ ವೈಭವದಿಂದ ಸಂಪನ್ನಗೊಂಡಿತು.

Advertisement

ಗುರುವಾರ ದ್ವಾದಶಿಯಂತೆ ಮುಂಜಾವ ಶ್ರೀಕೃಷ್ಣ – ಮುಖ್ಯಪ್ರಾಣರಿಗೆ ಪರ್ಯಾಯ ಶ್ರೀಪಾದರು ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ ಮೆರವಣಿಗೆ ನಡೆಯಿತು. 

ಮೂರು ವಿಗ್ರಹಗಳ ಉತ್ಸವ
ಚಿನ್ನದ ರಥದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ಮೂರ್ತಿಯೂ ಇನ್ನೊಂದು ರಥದಲ್ಲಿ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳ ಉತ್ಸವ ನಡೆಯಿತು. ಉತ್ಸವದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.

ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಮಡಕೆಗಳನ್ನು ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಸಾಗಿದಂತೆ ಮೆರವಣಿಗೆಯೂ ಸಾಗಿತು. ಕೊನೆಯಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಠದ ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು.

ಅಘÂì ಪ್ರದಾನ
ಬುಧವಾರ ಮಧ್ಯರಾತ್ರಿ ಶ್ರೀಕೃಷ್ಣ ಮಠ ದಲ್ಲಿ ಕೃಷ್ಣ ದೇವರ ಪೂಜೆಯ ಅನಂತರ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ಕೃಷ್ಣಾಪುರ ಶ್ರೀ ವಿದ್ಯಾ ಸಾಗರತೀರ್ಥ ಶ್ರೀಪಾದರು, ಪೇಜಾ ವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಗರ್ಭಗುಡಿಯಲ್ಲಿ  ಅಘÂì ನೀಡಿ ದರು. ಚಂದ್ರೋದಯ ಸಮಯ(12.34)ದಲ್ಲಿ ತುಳಸೀಕಟ್ಟೆಯಲ್ಲಿ ಅಘÂì ನೀಡಿದರು.

Advertisement

ಪ್ರಸಾದ ವಿತರಣೆ
ಉತ್ಸವ ನಡೆಯುವಾಗ ಪ್ರಸಾದ ಬಿಸಾ ಡುವ ಕ್ರಮವನ್ನು ಕೇವಲ ಸಾಂಕೇತಿಕವಾಗಿ ಹಣ್ಣುಗಳಿಗೆ ಮಾತ್ರ ಸೀಮಿತವಾಗಿಸಿ ಉತ್ಸವ ಮುಗಿದ ಬಳಿಕ ಭಕ್ತರಿಗೆ ಉಂಡೆ, ಚಕ್ಕುಲಿ ಗಳನ್ನು ವಿತರಿಸಲಾಯಿತು.

ಶ್ರೀಕೃಷ್ಣನ ಜನನ ವೇಳೆ ಭಾರೀ ಮಳೆ!
ಬುಧವಾರ ಮಧ್ಯ ರಾತ್ರಿ ಶ್ರೀಕೃಷ್ಣ ನಿಗೆ ಅಘÂì ಪ್ರದಾನವಾದ ಕೆಲವೇ ನಿಮಿಷಗಳಲ್ಲಿ ವರುಣನ ಆಗಮನವಾಯಿತು. ಗುಡುಗು ಸಹಿತ 2 ಗಂಟೆ ಮಳೆ ಸುರಿದು ಪುರಾಣವನ್ನು ನೆನಪಿಸಿತು. ಪೇಜಾವರ ಶ್ರೀಗಳ ಈ ಪಂಚಮ ಪರ್ಯಾಯದಲ್ಲಿ ನಡೆದ ಬ್ರಹ್ಮ ಕಲಶೋತ್ಸವದ ಸಂದರ್ಭದಲ್ಲಿಯೂ ಮಳೆ ಯಾಗಿರುವುದು ಇಲ್ಲಿ ಸ್ಮರಣೀಯ.

ಕವಿದ ಮೋಡ ಜಾರಿ ಹೋಗಿತ್ತು
ಗುರುವಾರ ಮಾತ್ರ ಉಡುಪಿ ಸುತ್ತಮುತ್ತ ಮೋಡ ಕವಿದ ವಾತಾವರಣವಿತ್ತು. ಆನಂತರ ಹನಿ ಹನಿ ಮಳೆಯಾಗಿತ್ತು. ಮಣಿಪಾಲದಲ್ಲಿ ಜೋರು ಮಳೆಯಾಗಿತ್ತು. ಆದರೆ ಕೃಷ್ಣ ಮಠದ ವಿಟ್ಲಪಿಂಡಿ ಸಂದರ್ಭ ಮಳೆ ಅಡ್ಡಿ ಇರದೆ ಭಕ್ತರು ಉತ್ಸವ ಕಣ್ತುಂಬಿಕೊಂಡರು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭವೂ ಮಳೆ ಬಾರದ್ದರಿಂದ ಜನಜಂಗುಳಿ ಹೆಚ್ಚಿತ್ತು.

ಮೊಬೈಲ್‌ ಕೆಮರಾ, ಫೋಟೋಗ್ರಫ‌ರ್
ವಿಟ್ಲಪಿಂಡಿಯ ಮೆರವಣಿಗೆ, ರಥೋತ್ಸವದ ವಿವಿಧ ಸನ್ನಿವೇಶಗಳನ್ನು ಸೆರೆ ಹಿಡಿಯಲು ಜನಜಂಗುಳಿಯ ನಡುವೆ, ಫೋಟೋ ತೆಗೆಯಲು ಫೋಟೋಗ್ರಾಫ‌ರ್‌ಗಳು ಒಂದು ಕಡೆ ಸರ್ಕಸ್‌ ಮಾಡುತ್ತಿದ್ದರೆ ಇನ್ನೊಂದೆಡೆ ಜನರು ತಮ್ಮ ಮೊಬೈಲ್‌ ಕೆಮರಾಗಳ ಮೂಲಕ ಚಿತ್ರ ಮತ್ತು ವೀಡಿಯೋ ದೃಶ್ಯಾವಳಿಗಳನ್ನು ಸೆರೆ ಹಿಡಿಯುವುದು ಸಾಮಾನ್ಯ ದೃಶ್ಯವಾಗಿ ಕಂಡುಬಂತು.

ಬಾರಕೂರಿನಲ್ಲಿ ವಿಟ್ಲಪಿಂಡಿ
ಬ್ರಹ್ಮಾವರ:
ಬಾರಕೂರು ಮೂಡು ಕೇರಿಯ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಮೊಸರುಕುಡಿಕೆ ಉತ್ಸವ ಗುರುವಾರ ಸಂಭ್ರಮದಿಂದ ಜರುಗಿತು. 

ಸಾಲಿಗ್ರಾಮದಲ್ಲಿ 
ಕೋಟ:
ಸಾಲಿಗ್ರಾಮ ಗುರುನರಸಿಂಹ ದೇವ ಸ್ಥಾನದಲ್ಲಿ ಬುಧವಾರ ರಾತ್ರಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಅಘÂì ಪ್ರದಾನ ನಡೆಯಿತು. ಗುರುವಾರ ಸಂಜೆ ನರಸಿಂಹ ದೇವಸ್ಥಾನದಿಂದ ಚೇಂಪಿ ಗೋಪಾಲಕೃಷ್ಣ ದೇವಸ್ಥಾನದವರೆಗೆ ವಿಟ್ಲ ಪಿಂಡಿ ಉತ್ಸವ ನಡೆದು ವಾಪಸು ಆಂಜನೇಯ ದೇವಸ್ಥಾನಕ್ಕೆ ಬಂದು ಅಲ್ಲಿ ಪೂಜೆ ನಡೆದ ಬಳಿಕ ನರಸಿಂಹ ದೇವಸ್ಥಾನಕ್ಕೆ ತಲುಪಿತು. ಆಡಳಿತೆ ಮೊಕ್ತೇಸರ ಅನಂತಪದ್ಮನಾಭ ಐತಾಳ್‌, ಅರ್ಚಕ ಜನಾರ್ದನ ಅಡಿಗ, ತಂತ್ರಿ ಕೃಷ್ಣ ಸೋಮಯಾಜಿ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. 

ಕಣ್ಣಿಗೆ ಚುಚ್ಚಿದ ಡ್ರೋಣ್‌ 
ವಿಟ್ಲಪಿಂಡಿಯಂದು ಡ್ರೋಣ್‌ ಕೆಮರಾ ಹಾರಿಸಿ ಫೋಟೋ ಕ್ಲಿಕ್ಕಿಸುವ ಭರದಲ್ಲಿ 2 ಕಡೆ ಡ್ರೋಣ್‌ ಜನರ ಮೇಲೆ ಬಿದ್ದ ಪ್ರಸಂಗ ನಡೆದಿದೆ. ರಥಬೀದಿಯಲ್ಲಿ ಕೆಳಗೆ ಬಿದ್ದ ಕಪ್ಪು ಬಣ್ಣದ ಡ್ರೋಣ್‌ನ ರೆಕ್ಕೆಗಳು ತಾಗಿ ದೊಡ್ಡಣ ಗುಡ್ಡೆಯ ಯುವಕ ರೊಬ್ಬರ ಕಣ್ಣಿಗೆ ಗಂಭೀರ ಪೆಟ್ಟಾಗಿದೆ. ಅವರ ಕತ್ತು, ಮುಖಕ್ಕೂ ತರಚಿದ ಗಾಯಗಳಾಗಿವೆ. ಮಠದ ಕೆರೆಯ ಪೂರ್ವ ಬದಿಯಲ್ಲಿ ಬಿಳಿ ಬಣ್ಣದ ಡ್ರೋಣ್‌ ಕೆಳಗೆ ಬಿದ್ದಿದೆ. ಡ್ರೋಣ್‌ ಅವಘಡದ ಕುರಿತು ಯಾರಾದರೂ ಪೊಲೀಸ್‌ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next