ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇಗುಲದಲ್ಲಿ ಆ. 21ರಿಂದ 28ರ ತನಕ 123ನೇ ಭಜನ ಸಪ್ತಾಹ ಮಹೋತ್ಸವ ಜರಗಲಿದೆ.
ಆ. 21ರ ಮಧ್ಯಾಹ್ನ 12.05ಕ್ಕೆ ದೀಪ ಪ್ರಜ್ವಲನೆ ಮತ್ತು ದೀಪ ಸ್ಥಾಪನೆಯೊಂದಿಗೆ ಸಪ್ತಾಹ ಆರಂಭಗೊಳ್ಳಲಿದೆ. ಊರ ಪರವೂರ ಭಜನ ಮಂಡಳಿಗಳು ಏಳು ದಿನಗಳ ಕಾಲ ಅಹೋರಾತ್ರಿ ಭಜನೆ ನಡೆಸಲಿವೆ.
ಆ. 26ರ ರಾತ್ರಿ 9ಕ್ಕೆ ದೇಗುಲದಲ್ಲಿ ವಿಶೇಷ ಪುಷ್ಪಾಲಂಕಾರದೊಂದಿಗೆ ರಂಗಪೂಜೆ, ಆ. 27ರ ಸಂಜೆ 5ಕ್ಕೆ ಭಕ್ತರೊಂದಿಗೆ ನಗರ ಭಜನೆ, ಆ. 28ರಂದು ಮಂಗಲೋತ್ಸವ ನಡೆಯಲಿದೆ. ಅಂದು ಬೆಳಗ್ಗೆ 11ಕ್ಕೆ ನಗರ ಭಜನೆ, 11.30ಕ್ಕೆ ಮಹಾಪೂಜೆ, ಮಧ್ಯಾಹ್ನ ಶ್ರೀ ವಿಠೊಬ ರುಖುಮಾಯಿ ದೇವರಿಗೆ ಮಹಾಪೂಜೆ, ಭಕ್ತರಿಂದ ಉರುಳು ಸೇವೆ (ಮಡಸ್ಥಾನ), ಮೊಸರು ಕುಡಿಕೆ, ತೆಪ್ಪಂಗಾಯಿ ಇತ್ಯಾದಿ, ಸಂಜೆ 5ರಿಂದ 8ರ ತನಕ ಸಮಾರಾಧನೆ ನಡೆಯಲಿದೆ.
ಸಪ್ತಾಹ ಮಹೋತ್ಸವದಲ್ಲಿ ಪ್ರತೀದಿನ ಪ್ರಾತಃಕಾಲ 5.30ಕ್ಕೆ ದೇವರಿಗೆ ಕಾಕಡಾರತಿ ಸೇವೆ ನೆರವೇರಲಿದೆ ಎಂದು ದೇಗುಲದ ಆಡಳಿತ ಮಂಡಳಿ, ಭಜನ ಮಹೋತ್ಸವ ಸಮಿತಿಯ ಪ್ರಕಟನೆ ತಿಳಿಸಿದೆ.