Advertisement

ಉಡುಪಿ ಲಾಕ್‌ಡೌನ್‌ ಮುಕ್ತನಗರಕ್ಕೆ ಮತ್ತೆ ಜನಜೀವನ ಕಳೆ

07:22 PM Jul 05, 2021 | Team Udayavani |

ಉಡುಪಿ: ಉಡುಪಿ ಜಿಲ್ಲೆ ಲಾಕ್‌ಡೌನ್‌ನಿಂದ ಮುಕ್ತವಾಗುತ್ತಿದ್ದಂತೆ ಜನರು ಓಡಾಟವೂ ಹೆಚ್ಚಳವಾಗಿದೆ. ನಗರದಲ್ಲಿ ಟ್ರಾಫಿಕ್‌ ದಟ್ಟನೆ ಆಗುವ ಮೂಲಕ ಉಡುಪಿ ಮತ್ತೆ ಸಹಜಸ್ಥಿತಿಗೆ ಮರಳಿದೆ.

Advertisement

ಬಹುದಿನಗಳಿಂದ ಮುಚ್ಚಿದ್ದ ಮಾಲ್‌ಗ‌ಳೂ ಸೋಮವಾರದಿಂದ ಗ್ರಾಹಕರಿಗೆ ಸೇವೆ ನೀಡಿದವು. ಬಟ್ಟೆ ಮಳಿಗೆ, ಚಪ್ಪಲಿ, ಜುವೆಲರಿ ಶಾಪ್‌ಗ್ಳು, ಗ್ಯಾರೇಜುಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು.

ಮತ್ತೆ ಟ್ರಾಫಿಕ್‌ ದಟ್ಟನೆ
ಉಡುಪಿ ನಗರದಾದ್ಯಂತ ಲಾಕ್‌ಡೌನ್‌ ಸಡಿಲಗೊಳ್ಳುತ್ತಿದ್ದಂತೆ ಟ್ರಾಫಿಕ್‌ ದಟ್ಟನೆ ಕಂಡುಬಂತು. ರಸ್ತೆಯ ಎರಡೂ ಬದಿಗಳಲ್ಲಿಯೂ ವಾಹನಗಳನ್ನು ನಿಲುಗಡೆ ಮಾಡುವ ಪ್ರಮೇಯ ಈ ಹಿಂದಿನಂತೆಯೇ ಮುಂದುವರಿಯಿತು.
ಕ್ರೀಡಾಂಗಣದಲ್ಲಿ ಕ್ರೀಡಾಪುಟುಗಳ ಅಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಮದುವೆ ಸಮಾರಂಭಕ್ಕೆ ಅನುಮತಿ ಕಡ್ಡಾಯ
ಮದುವೆ ಹಾಗೂ ಕೌಟುಂಬಿಕ ಶುಭ ಸಮಾರಂಭಗಳಿಗೆ ಷರತ್ತಿಗೊಳಪಟ್ಟು 100 ಜನರಿಗೆ ಮೀರದಂತೆ ನಡೆಸಲು ಅನುಮತಿಸಲಾಗಿದೆ. ಸಮಾರಂಭಗಳನ್ನು ನಡೆಸುವವರು ಆಮಂತ್ರಣ ಪತ್ರ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳೊಂದಿಗೆ ಸಹಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಹಶೀಲ್ದಾರ್‌ಗೆ ಸಲ್ಲಿಸಬೇಕಾಗುತ್ತದೆ.

ಕಾರ್ಯಸ್ಥಗಿಸಿದ್ದ ಚಟುವಟಿಕೆಗಳು
ಚಿತ್ರಮಂದಿರಗಳು, ಸಿನೆಮಾ ಹಾಲ್‌ಗ‌ಳು, ಪಬ್‌ಗಳು, ಶೈಕ್ಷಣಿಕ ಸಂಸ್ಥೆಗಳು, ಟುಟೋರಿಯಲ್ಸ್‌, ಕಾಲೇಜುಗಳು ಮುಚ್ಚಿದ್ದವು. ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹೇರಲಾಗಿತ್ತು.

Advertisement

ಇದನ್ನೂ ಓದಿ : ನೋಡುವ‌ ದೃಷ್ಠಿಯಂತೆ ಆನೆ ಕಾಣುತ್ತದೆ : ಯೋಗೇಶ್ವರ್, ಯತ್ನಾಳ್ ವಿರುದ್ಧ ನಿರಾಣಿ ಗುಡುಗು

ನಿಯಮಾವಳಿ ಮರೆತ ಜನರು
ಅನ್‌ಲಾಕ್‌ನ ಮೊದಲ ದಿನವೇ ಹೆಚ್ಚಿನ ಮಂದಿ ಕೊರೊನಾ ನಿಯಮಾವಳಿಗಳನ್ನು ಮರೆತಿರುವುದು ಎದ್ದು ಕಂಡಿತು. ಹೆಚ್ಚಿನ ಮಂದಿ ಮಾಸ್ಕ್ ಧರಿಸುವ ಗೋಜಿಗೂ ಹೋಗಲಿಲ್ಲಿ. ಜನರ ಓಡಾಟ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಮತ್ತಷ್ಟು ಜಾಗರೂಕರಾಗಿ ನಿಯಮಾವಳಿ ಪಾಲಿಸಿದರಷ್ಟೇ ಸೋಂಕು ನಿಯಂತ್ರಣಗೊಂಡು ಮತ್ತೆ ಲಾಕ್‌ಡೌನ್‌ ತಪ್ಪಿಸಲು ಸಾಧ್ಯವಿದೆ.

ಬಸ್ಸುಗಳ ಸಂಖ್ಯೆ ಹೆಚ್ಚಳ
ಉಡುಪಿ ನಗರದಲ್ಲಿ ಖಾಸಗಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸಿದವು. ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಿತ್ತು. ಸೋಮವಾರದಿಂದ ಶೇ.40ರಷ್ಟು ಬಸ್ಸುಗಳು ಓಡಾಟ ಮಾಡಿದವು. ಬಸ್ಸುಗಳಲ್ಲಿಯೂ ಶೇ.100ರಷ್ಟು ಪ್ರಯಾಣಿಕರನ್ನು ತುಂಬಲು ಅವಕಾಶ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next