Advertisement
ಸಾಸ್ತಾನದಲ್ಲಿ ನೀಡುವಂತೆ ವಿನಾಯಿತಿಯನ್ನು ಇಲ್ಲೂ ನೀಡಬೇಕೆಂದು ಪ್ರತಿಭಟನೆ ಆರಂಭವಾಗಿದ್ದು, 24 ದಿನ ಕಳೆದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಜ. 31ರಂದು ಭೇಟಿ ಯಿತ್ತರು. ಈ ವೇಳೆ ಕಂಪೆನಿ ಅಧಿಕಾರಿ ಪ್ರತಿಕೂಲ ನಿರ್ಧಾರ ಪ್ರಕಟಿಸಿದ್ದಾರೆ.
Related Articles
Advertisement
ಈ ವೇಳೆ ನವಯುಗ ಕಂಪೆನಿಗೆ ಧಿಕ್ಕಾರ ಕೂಗಿದ ಪ್ರತಿಭಟನಕಾರರು ಹೆಜಮಾಡಿ ಒಳರಸ್ತೆಯ ಟೋಲ್‌ಗೇಟನ್ನು ತೆಗೆಯುವಂತೆ ಒತ್ತಾಯ ಹೇರಿದರು. ಈ ವೇಳೆ ಜಿಲ್ಲಾಡಳಿತ ಟೋಲ್ ವಿಚಾರದಲ್ಲಿ ಆದೇಶಿಸಲು ಕಾನೂನಿನಲ್ಲಿ ಅವಕಾಶ ಗಳಿಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ, ರಾಜ್ಯ ಸರಕಾರಗಳ ನಡುವಿನ ವಿಚಾರ ಇದು. ರಾಜ್ಯ ಸರಕಾರ ನವಯುಗ ಕಂಪೆನಿಗೆ ಪೊಲೀಸ್ ರಕ್ಷಣೆ ನೀಡಲು ಹೇಳಿದಾಗ ಅದನ್ನು ನೀಡಲು ಆದೇಶಿಸಿದ್ದೆವು ಎಂದು ಜಿಲ್ಲಾಧಿಕಾರಿ ಮುಷ್ಕರ ನಿರತರಿಗೆ ಮನವರಿಕೆ ಮಾಡಿದರು.
ಉತ್ತರದಿಂದ ಅಸಮಾಧಾನಗೊಂಡ ಮುಷ್ಕರ ನಿರತರು ಸಾಸ್ತಾನದ ವಿನಾಯಿತಿ ಹಿಂತೆಗೆದುಕೊಂಡರೆ ಜಿಲ್ಲೆಯ ಜನತೆ ರೊಚ್ಚಿಗೇಳಲಿದ್ದಾರೆ. ನಾವು ನಿರ್ಧಾರಕ್ಕೆ ಬದ್ಧರಾಗಿ ಪ್ರತಿಭಟನೆ ಮುಂದುವರಿಸುವುದಾಗಿ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.
ಪಡುಬಿದ್ರಿ: ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ವಸೂಲಾತಿ ನಡೆಸುತ್ತಿದೆ ಎನ್ನುವ ಟೋಲ್ ವಿರೋಧಿ ಹೋರಾಟಗಾರರ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೆದ್ದಾರಿ ಸರ್ವಿಸ್ ರಸ್ತೆ ಸುತ್ತಮುತ್ತಲಿನ ಅವ್ಯವಸ್ಥೆ ವೀಕ್ಷಿಸಿ ನವಯುಗ ಯೋಜನಾಧಿಕಾರಿ ಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅವ್ಯವಸ್ಥೆ ಕಣ್ಣಾರೆ ದರ್ಶನ
ಪಡುಬಿದ್ರಿ ಕಾರ್ಕಳ ಜಂಕ್ಷನ್‌ಗಳಲ್ಲಿ ವಿದ್ಯುದ್ದೀಪ ಹತ್ತದಿರುವುದು, ಸಿಗ್ನಲ್ ದೀಪ ಅಳವಡಿಸದಿರುವುದು, ಉಡುಪಿ ಬಸ್ ನಿಲ್ದಾಣವನ್ನು ಇನ್ನೂ ನಿರ್ಮಿಸದೇ ವಿಳಂಬ ನೀತಿ ಅನುಸರಿಸುತ್ತಿರುವುದು, ಸರ್ವಿಸ್ ರಸ್ತೆಯಲ್ಲೇಳುತ್ತಿರುವ ಧೂಳಿನ ರಾಶಿ, ಹೆದ್ದಾರಿ ಬದಿಯಲ್ಲೇ ರಾಶಿ ಬಿದ್ದಿರುವ ದೊಡ್ಡ ಮರಗಳ ಬುಡಗಳು ಇತ್ಯಾದಿಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು.
’15ದಿನದಲ್ಲಿ ಸರ್ವಿಸ್ ರಸ್ತೆ ಮುಗಿಸಿ’
ನವಯುಗ ಅಧಿಕಾರಿ ಶಂಕರ್ ರಾವ್ ಅವರನ್ನು ಸ್ಥಳಕ್ಕೆ ಕರೆಸಿದ ಜಿಲ್ಲಾಧಿಕಾರಿ ನಿತ್ಯ ಮೂರು ಬಾರಿ ಧೂಳುಮಯ ರಸ್ತೆಗೆ ನೀರುಣಿಸುವಂತೆ ಮತ್ತು ನಾಳೆಯೊಳಗಾಗಿ ಮರಗಳ ಬುಡ ಸ್ಥಳಾಂತರಿಸಬೇಕು.