Advertisement

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

12:47 AM Dec 29, 2024 | Team Udayavani |

ಉಡುಪಿ: ಬೃಹತ್‌ ಗೀತೋ ತ್ಸವದ ಮಂಗಳ್ಳೋತ್ಸವು ಡಿ.29ರಂದು ರಾಜಾಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾ ದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾ ದರ ಉಪಸ್ಥಿತಿಯಲ್ಲಿ ನಡೆಯಲಿದೆ. ಗೀತಾ ಜ್ಞಾನ ದೀಪೋತ್ಸವದ ಜತೆಗೆ ಶ್ರೀಪಾದರು ಶ್ರೀ ಕೃಷ್ಣನಿಗೆ ಸಮರ್ಪಿಸಲಿರುವ ಪಾರ್ಥಸಾರಥಿ ಸುವರ್ಣ ರಥದ ಮಾದರಿಯ ಗೀತಾ ರಥ ವನ್ನು ರಾಜಾಂಗ ಣದ ಪರಿಸರದಲ್ಲಿ ಎಳೆಯುವ ಮೂಲಕ ವಿಶಿಷ್ಟವಾಗಿ ಮಂಗಳ್ಳೋತ್ಸವ ಆಚರಿಸಲಾಗುವುದು.

Advertisement

ಸಂಜೆ 5ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ದಿನೇಶ್‌, ಉ ಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ  ನ್ಯಾ ಯಾ ಲ ಯದ ನ್ಯಾಯಾಧೀಶ ಕಿರಣ್‌ ಎಸ್‌.  ಗಂಗಣ್ಣವರ್‌, ನಟ ಉಪೇಂದ್ರ, ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ,ಉದ್ಯಮಿಗಳಾದ ಮನೋಹರ್‌ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಶ್ರೀಪಾದರು 2025ರ ವಿಶ್ವಾವಸು ನಾಮ ಸಂವ ತ್ಸ ರದ ಶ್ರೀ ಪುತ್ತಿಗೆ ಮಠ ಪರ್ಯಾಯ ಪಂಚಾಂಗ ಬಿಡು ಗಡೆ ಮಾಡಲಿದ್ದಾರೆ. ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಗೀತೆಪ್ರಚಾರದಿಂದ ಆತ್ಮೋದ್ಧಾರ, ವಿಶ್ವಕಲ್ಯಾಣ : “ರಾಜೋವಾಚ’ ಮತ್ತು “ಲೈಫ್’ ಕೃತಿ ಅನಾವರಣಗೊಳಿಸಿ ಪರ್ಯಾಯ ಮಠದ ಪುತ್ತಿಗೆ ಶ್ರೀ

ಆಧುನಿಕ ಸೌಲಭ್ಯದಿಂದ ಆತ್ಮೋದ್ಧಾರ ಅಥವಾ ಪುಣ್ಯಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಗೀತೆಯನ್ನು ಪ್ರಚಾರ ಮಾಡುವುದರಿಂದ ಪುಣ್ಯದ ಜತೆಗೆ ಮೋಕ್ಷ ಪಡೆಯಲು ಸಾಧ್ಯವಿದೆ ಹಾಗೂ ಅಕ್ಷಯಫ‌ಲ ದೊರೆಯುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಶ್ರೀ ಕೃಷ್ಣಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದಿಂದ ನಡೆಯುತ್ತಿರುವ ಬೃಹತ್‌ ಗೀತೋತ್ಸವದ ಅಂಗವಾಗಿ ಶನಿವಾರ ರಾಜಾಂಗಣದಲ್ಲಿ ದಂಪತಿ ಡಾಟ್‌ ಕಾಮ್‌ ವೆಬ್‌ಸೈಟ್‌ ಹಾಗೂ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಪ್ರತಿನಿಧಿ ಯೋಗೀಂದ್ರ ಭಟ್‌ ಉಳಿ ಅವರ “ರಾಜೋವಾಚ’ ಮತ್ತು “ಲೈಫ್’ ಕೃತಿಗಳನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ಭಗವಂತ ಜಗತ್ತಿನ ಪೋಷಕ. ಅವನ ಮಾರ್ಗದರ್ಶನದಂತೆ ನಾವು ನಡೆಯಬೇಕು. ನಮ್ಮ ಉದ್ಧಾರಕ್ಕಾಗಿ ಶ್ರೀ ಕೃಷ್ಣ ನೀಡಿದ ಸಂದೇಶ ಪ್ರಚಾರಕ್ಕಾಗಿ ಭಗವದ್ಗೀತೆಯನ್ನು ಇನ್ನೊಬ್ಬರಿಗೆ ಕೊಡಬೇಕು. ಇದರಿಂದ ಆತೊ¾àದ್ಧಾರ, ಲೋಕೋದ್ಧಾರ, ಲೋಕಕಲ್ಯಾಣ ಹಾಗೂ ವಿಶ್ವಶಾಂತಿ ಸಾಧ್ಯ ಎಂದರು.

Advertisement

ಪೂಜೆ, ಜನಸೇವೆ, ಸಮಾಜ ಸೇವೆ ಮಾಡುವುದ ಕ್ಕಿಂತಲೂ ಹೆಚ್ಚು ಶ್ರೇಷ್ಠವಾದುದ್ದು ಭಗವದ್ಗೀತೆ ಪ್ರಚಾರ. ಭಗವದ್ಗೀತೆ ಪ್ರಚಾರಕ್ಕಿಂತ ಸತ್ಕಾರ್ಯ ಬೇರೊಂದಿಲ್ಲ. ಭಗವಂತನ ಸಂದೇಶ ಎಲ್ಲರಿಗೂ ತಲುಪಿಸುವುದು ಅತಿಮುಖ್ಯ ಎಂದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿದರು.

ಅನಿವಾಸಿ ಭಾರತೀಯರಾದ ಶ್ರೀಕಾಂತ್‌ ಜೋಷಿ, ವಿದ್ಯಾ ಜೋಷಿ ದಂಪತಿಗೆ ಶ್ರೀಪಾದರು ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಅನುಗ್ರಹಿಸಿದರು.

ಅನಿವಾಸಿ ಭಾರತೀಯರಾದ ಪ್ರಹ್ಲಾದ ಹಾಗೂ ಈಶನ್‌ ಭಗವದ್ಗೀತೆಯ ಕುರಿತು ಮಾತನಾಡಿದರು.
ಆಂಧ್ರಪ್ರದೇಶದ ಶಾಸಕ ವೆಂಕಟ ಪ್ರಸಾದ್‌, ಭಗವದ್ಗೀತೆ ಪ್ರಚಾರಕಿ ಎ.ಎ.ಪಾರ್ವತಿ, ಅನಿವಾಸಿ ಭಾರತೀಯರಾದ ಮಹೇಶ್‌, ರೇಣುಕಾ ದಂಪತಿ ಉಪಸ್ಥಿತರಿದ್ದರು. ಯೋಗೀಂದ್ರ ಭಟ್‌ ಉಳಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next