Advertisement
ಉತ್ತಮ ಮಳೆತಾಲೂಕಿನೆಲ್ಲೆಡೆ ಉತ್ತಮ ಮಳೆ ಯಾಗಿದೆ. ಉಡುಪಿ ಹಾಗೂ ಕಾರ್ಕಳ ತಾಲೂಕಿನಲ್ಲಿ ಜೂ.15ರ ಬೆಳಗ್ಗೆ 8.30 ಗಂಟೆಗೆ ಹಿಂದೆ 24 ತಾಸುಗಳಲ್ಲಿ ಕ್ರಮವಾಗಿ ಸರಾಸರಿ 56.5 ಮಿ.ಮೀ., 44.2 ಮಿ.ಮೀ. ಮಳೆಯಾಗಿದೆ. ಸೋಮವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ.
ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮದ ಮೀನಕ್ಕ ಪೂಜಾರ್ತಿ ಮನೆಯ ದನದ ಕೊಟ್ಟಿಗೆ ಮಳೆಯಿಂದಾಗಿ
ಕುಸಿದು ಭಾಗಶಃ ಹಾನಿಯಾಗಿದ್ದು 10,000 ರೂ. ನಷ್ಟವಾಗಿದೆ. 52 ಹೇರೂರು ಗ್ರಾಮದ ತಿಮ್ಮ ಪೂಜಾರಿ ಅವರ ವಾಸ್ತವ್ಯದ ಮನೆ ಗಾಳಿಮಳೆಯಿಂದ ಭಾಗಶಃ ಹಾನಿ ಯಾಗಿದ್ದು ಸುಮಾರು 40,000 ರೂ. ನಷ್ಟವಾಗಿದೆ. ಕಾಪು ತಾಲೂಕಿನ ಪಡು ಗ್ರಾಮದ ರತ್ನಾ ಜೆ. ಅವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದ್ದು ಸುಮಾರು 50,000 ರೂ. ಹಾಗೂ ಹೆಜಮಾಡಿ ಗ್ರಾಮದ ಯತೀಶ್ ಅವರ ಮನೆ ಗಾಳಿ ಮಳೆಯಿಂದ ಹಾನಿಯಾಗಿ 80,000 ರೂ. ನಷ್ಟವಾಗಿದೆ.
Related Articles
ಕುಂದಾಪುರ: ತಾಲೂಕಿನ ವಿವಿಧೆಡೆ ಸೋಮವಾರ ಮುಂಜಾನೆವರೆಗೆ ಬಿದ್ದ ಮಳೆ ವಿವರ ಹೀಗಿದೆ:
ಆಲೂರು 58, ನಾಡ 65, ನಾವುಂದ 30, ಕಾಳಾವರ 23, ಶಂಕರನಾರಾಯಣ 14, ಬಿಜೂರು 49,ಕಾಲ್ತೋಡು 60, ಕಂಬದಕೋಣೆ 56, ಮರವಂತೆ 53, ಪಡುವರಿ 54, ಯಡ್ತರೆ 57, ಆನಗಳ್ಳಿ 18, ಬೇಳೂರು 21, ಬೀಜಾಡಿ 28, ಹಂಗಳೂರು 22, ಹಟ್ಟಿಯಂಗಡಿ 34, ಹೆಂಗವಳ್ಳಿ 17, ಕೋಣಿ 22, ಕುಂಭಾಶಿ 37, ಮೊಳಹಳ್ಳಿ 25, ಚಿತ್ತೂರು 47, ಗಂಗೊಳ್ಳಿ 30, ಗುಜ್ಜಾಡಿ 40, ಹಕ್ಲಾಡಿ 58, ಹೆಮ್ಮಾಡಿ 37, ಆವರ್ಸೆ 26, ಗುಲ್ವಾಡಿ 34, ಕಟ್ ಬೇಲ್ತೂರು 42 ಮಿ.ಮೀ. ಮಳೆಯಾಗಿದೆ.
Advertisement